×
Ad

'ಮುಸ್ಲಿಂ ಸಿಬ್ಬಂದಿಯಲ್ಲ' ಎನ್ನುವ ಜಾಹೀರಾತು: ಬೇಕರಿ ಮಾಲಕನ ಬಂಧನ

Update: 2020-05-10 14:47 IST

ಹೊಸದಿಲ್ಲಿ: ‘ಆಹಾರಗಳನ್ನು ತಯಾರಿಸಿದ್ದು ಜೈನರು, ಮುಸ್ಲಿಂ ಸಿಬ್ಬಂದಿಯಲ್ಲ’ ಎನ್ನುವ ಜಾಹೀರಾತನ್ನು ಹಾಕಿದ್ದ ಚೆನ್ನೈಯ ಟಿ. ನಗರ್ ನ ಬೇಕರಿಯೊಂದರ ಮಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ಜಾಹೀರಾತಿನ ಫೋಟೊ ವೈರಲ್ ಆದ ನಂತರ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಜೈನ್ ಬೇಕರೀಸ್ ಎನ್ನುವ ಈತನ ಬೇಕರಿಯ ಜಾಹೀರಾತಿನಲ್ಲಿ ಎಲ್ಲಾ ಆಹಾರಗಳನ್ನು ಜೈನರು ತಯಾರಿಸಿದ್ದಾರೆ, ಯಾವುದೇ ಮುಸ್ಲಿಂ ಸಿಬ್ಬಂದಿ ಇಲ್ಲ ಎಂದು ಬರೆಯಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News