ಭಾರತದ ಹಾಕಿ ದಂತಕಥೆ ಬಲ್ಬೀರ್ ಸಿಂಗ್ ಸ್ಥಿತಿ ಗಂಭೀರ

Update: 2020-05-11 05:53 GMT

ಹೊಸದಿಲ್ಲಿ, ಮೇ 11: ಮೂರು ಬಾರಿ ಒಲಿಂಪಿಕ್ಸ್‌ನಲ್ಲಿ ಚಿನ್ನ ಜಯಿಸಿದ ಭಾರತದ ಹಾಕಿ ತಂಡದ ಸದಸ್ಯರಾಗಿದ್ದ ಬಲ್ಬೀರ್ ಸಿಂಗ್ ಸೀನಿಯರ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಬಲ್ಬೀರ್ 1948ರ ಲಂಡನ್ ಒಲಿಂಪಿಕ್ಸ್, 1952ರಲ್ಲಿ ಹೆಲ್ಸಿಂಕಿ ಮತ್ತು 1956ರಲ್ಲಿ ಮೆಲ್ಬೋರ್ನ್ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಭಾರತೀಯ ತಂಡಗಳ ಸದಸ್ಯರಾಗಿದ್ದರು.

 ಹಾಕಿ ದಂತಕಥೆ ಬಲ್ಬೀರ್ ಸಿಂಗ್ ಸೀನಿಯರ್ ಅವರನ್ನು ಗಂಭೀರ ಸಿ್ಥತಿಯಲ್ಲಿ ಶನಿವಾರ ಫೋರ್ಟಿಸ್ ಮೊಹಾಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಲ್ಬೀರ್ ಒಲಿಂಪಿಕ್ ಪುರುಷರ ಹಾಕಿ ಫೈನಲ್‌ನಲ್ಲಿ ಗಳಿಸಿದ ವೈಯಕ್ತಿಕ ಗೋಲುಗಳು ದಾಖಲೆಯಾಗಿ ಉಳಿದಿದೆ. 1952ರ ಒಲಿಂಪಿಕ್ಸ್ ಹಾಕಿ ಫೈನಲ್‌ನಲ್ಲಿ ನೆದರ್‌ಲ್ಯಾಂಡ್ಸ್ ವಿರುದ್ಧ ಭಾರತ 6-1 ಗೋಲುಗಳಿಂದ ಜುಗಳಿಸಿತ್ತು. ಈ ಪೈಕಿ ಐದು ಗೋಲು ಗಳಿಸಿದವರು ಬಲ್ಬೀರ್ ಸಿಂಗ್. 1975ರಲ್ಲಿ ಭಾರತ ವಿಶ್ವಕಪ್ ಜಯಿಸಿದಾಗ ಮತ್ತು 1971ರ ವಿಶ್ವಕಪ್‌ನಲ್ಲಿ ಭಾರತ ತಂಡ ಕಂಚು ಪಡೆದಾಗ ಬಲ್ಬೀರ್ ತಂಡದ ಮುಖ್ಯ ಕೋಚ್ ಆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News