2021 ಆಸ್ಟ್ರೇಲಿಯನ್ ಓಪನ್ ಗೆ ಟೆನಿಸ್ ಆಸ್ಟ್ರೇಲಿಯ ತಯಾರಿ

Update: 2020-05-11 06:06 GMT

ಮೆಲ್ಬೊರ್ನ್, ಮೇ 11:   ಕೊರೋನ ವೈರಸ್ ಭೀತಿಯ ಮಧ್ಯೆಯೂ ಮುಂದಿನ ವರ್ಷದ ಆಸ್ಟ್ರೇಲಿಯನ್ ಓಪನ್ ಗ್ರ್ಯಾಂಡ್ ಸ್ಲಾಮ್ ಟೂರ್ನಿಗೆ ಮೆಲ್ಬೋರ್ನ್‌ನಲ್ಲಿ ಸಿದ್ಧತೆಗಳು ನಡೆಯುತ್ತಿವೆ ಎಂದು ಟೆನಿಸ್ ಆಸ್ಟ್ರೇಲಿಯ (ಟಿಎ) ಮುಖ್ಯ ಕಾರ್ಯನಿರ್ವಾಹಕ ಮತ್ತು ಆಸ್ಟ್ರೇಲಿಯನ್ ಓಪನ್ ಪಂದ್ಯಾ ವಳಿಯ ನಿರ್ದೇಶಕ ಕ್ರೇಗ್ ಟಿಲೆ ಹೇಳಿದ್ದಾರೆ.

ಕೊರೋನ ವೈರಸ್ ಬಿಕ್ಕಟ್ಟಿನ ಪರಿಣಾಮವಾಗಿ ಎಟಿಪಿ ಮತ್ತು ಡಬ್ಲ್ಯೂಟಿಎ ಟೂರ್ನಿ ಎರಡನ್ನೂ ಜುಲೈ ಮಧ್ಯದವರೆಗೆ ಸ್ಥಗಿತಗೊಳಿಸಲಾಗಿದೆ. 2020ರ ವಿಂಬಲ್ಡನ್‌ನ್ನು ಈಗಾಗಲೇ ರದ್ದು ಪಡಿಸಲಾಗಿದೆ. ಆದರೆ ಫ್ರೆಂಚ್ ಓಪನ್‌ನ್ನು ಸೆಪ್ಟಂಬರ್‌ಗೆ ಮುಂದೂಡಲಾಗಿದೆ.

 ಪಂದ್ಯಾವಳಿಯು ಆಕಸ್ಮಿಕ ಯೋಜನೆಗಳನ್ನು ರೂಪಿಸಿದೆ, ಆದರೆ ಆಸ್ಟ್ರೇಲಿಯನ್ ಓಪನ್ ಜನವರಿಯಲ್ಲಿ ನಡೆಯುವುದನ್ನು ನಿರೀಕ್ಷಿಸಲಾಗಿದೆ ಎಂಬ ವಿಶ್ವಾಸದಲ್ಲಿ ಟಿಲೆ ಇದ್ದಾರೆ.

ಈ ಸಮಯದಲ್ಲಿ ನಾವು ಆಸ್ಟ್ರೇಲಿಯನ್‌ಓಪನ್ ಟೂರ್ನಿಗೆ ತಯಾರಿ ನಡೆಸುತ್ತಿದ್ದೇವೆ, ನಮ್ಮ 500 ಅಂತರ್‌ರಾಷ್ಟ್ರೀಯ ಪಂದ್ಯಗಳನ್ನು ಆಸ್ಟ್ರೇಲಿಯಕ್ಕೆ ಸೇರಿಸಲು ಒಂದು ಮಾರ್ಗವನ್ನು ಕಂಡುಕೊಂಡಿದ್ದೇವೆ. ಅದೇ ಸಮಯದಲ್ಲಿ, ನಾವು ಅಭಿಮಾನಿಗಳನ್ನು ಹೊಂದಿದ್ದೇವೆ ಎಂದು ಆಶಿಸುತ್ತೇವೆ ಎಂದರು.

ಏಳು ತಿಂಗಳುಗಳು ಬಹಳ ದೂರ ದಲ್ಲಿವೆ. ಆದರೆ ನಾವು ಆಸ್ಟ್ರೇಲಿಯನ್ ಓಪನ್‌ಗೆ ಯೋಜಿಸುತ್ತಿದ್ದೇವೆ. ಆಟಗಾರರ ಪರಿಸ್ಥಿತಿಯನ್ನು ಮಾತ್ರ ನಾವು ಯೋಚಿಸಬೇಕಾಗಿದೆ ಮತ್ತು ಜನಸಂದಣಿಯನ್ನಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News