×
Ad

20 ವರ್ಷಗಳಲ್ಲಿ ಚೀನಾದಿಂದ 5 ಸಾಂಕ್ರಾಮಿಕ ರೋಗಗಳು: ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ

Update: 2020-05-13 21:04 IST

ವಾಶಿಂಗ್ಟನ್, ಮೇ 13: ಕಳೆದ 20 ವರ್ಷಗಳಲ್ಲಿ ಐದು ಮಹಾಸಾಂಕ್ರಾಮಿಕ ರೋಗಗಳು ಚೀನಾದಿಂದ ಹೊರಬಂದಿವೆ ಹಾಗೂ ಒಂದು ಹಂತದಲ್ಲಿ ಅದು ನಿಲ್ಲಬೇಕಾಗಿದೆ ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಬರ್ಟ್ ಒಬ್ರಿಯಾನ್ ಹೇಳಿದ್ದಾರೆ. ಪ್ರಸಕ್ತ ಜಗತ್ತನ್ನೇ ತೆವಳುವಂತೆ ಮಾಡಿರುವ ನೋವೆಲ್-ಕೊರೋನ ವೈರಸ್‌ನ ಸೃಷ್ಟಿಗೂ ಆ ದೇಶವೇ ಕಾರಣ ಎಂದು ಅವರು ಬೆಟ್ಟುಮಾಡಿದ್ದಾರೆ.

ನೂತನ-ಕೊರೋನ ವೈರಸ್‌ಗೆ ಜಗತ್ತಿನಾದ್ಯಂತ ಈವರೆಗೆ ಬಲಿಯಾಗಿರುವವರ ಸಂಖ್ಯೆ 2.50 ಲಕ್ಷವನ್ನು ದಾಟಿದೆ.

ಜಗತ್ತಿನಾದ್ಯಂತ ಜನರು ಬಂಡೆದ್ದಿದ್ದಾರೆ ಹಾಗೂ ಇನ್ನೆಂದೂ ಈ ಸಾಂಕ್ರಾಮಿಕ ರೋಗಗಳು ಚೀನಾದಿಂದ ಹೊರಬರುವುದನ್ನು ನಾವು ಸಹಿಸುವುದಿಲ್ಲ ಎಂಬುದಾಗಿ ಚೀನಾ ಸರಕಾರಕ್ಕೆ ಹೇಳುತ್ತಿದ್ದಾರೆ. ವೈರಸ್ ಪ್ರಾಣಿಗಳ ಮಾರುಕಟ್ಟೆಯಿಂದ ಬಂದಿರಬಹುದು ಅಥವಾ ಪ್ರಯೋಗಾಲಯದಲ್ಲಿ ಸೃಷ್ಟಿಯಾಗಿರಬಹುದು. ಉತ್ತರ ಯಾವುದಾದರೂ ಒಳ್ಳೆಯದಾಗಿರುವುದಿಲ್ಲ ಎಂದು ಶ್ವೇತಭವನದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಳಿದರು.

“ಕಳೆದ 20 ವರ್ಷಗಳಲ್ಲಿ ಚೀನಾದಿಂದ ಬಂದಿರುವ ಐದು ಸಾಂಕ್ರಾಮಿಕಗಳನ್ನು ನಾವು ನೋಡಿದ್ದೇವೆ. ಸಾರ್ಸ್, ಹಕ್ಕಿಜ್ವರ, ಹಂದಿಜ್ವರ ಮತ್ತು ಈಗ ಕೋವಿಡ್-19. ಚೀನಾದಲ್ಲಿ ತಲೆದೋರುವ ಭಯಾನಕ ಸಾರ್ವಜನಿಕ ಆರೋಗ್ಯ ಪರಿಸ್ಥಿತಿಯನ್ನು ಜಗತ್ತಿಗೆ ಛೂಬಿಡಲಾಗುತ್ತದೆ. ಇದನ್ನು ಜಗತ್ತು ಎಷ್ಟು ಸಮಯ ಸಹಿಸಬಹುದು” ಎಂದು ಅವರು ಹೇಳಿದರು.

ಆದರೆ, ಚೀನಾದಿಂದ ಹೊರಬಂದಿರುವ ಐದನೇ ಸಾಂಕ್ರಾಮಿಕವನ್ನು ಅವರು ಹೆಸರಿಸಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News