ರಾಷ್ಟ್ರೀಯ ಹೆದ್ದಾರಿ ಅಸಮರ್ಪಕ ಕಾಮಗಾರಿ: ಪರ್ಕಳದಲ್ಲಿ ಮನೆಗಳೊಳಗೆ ನುಗ್ಗಿದ ನೀರು

Update: 2020-05-15 15:53 GMT

ಪರ್ಕಳ, ಮೇ 15: ಶುಕ್ರವಾರ ಸಂಜೆ ಸುರಿದ ಭಾರೀ ಮಳೆಗೆ ಪರ್ಕಳ ಬಾಸೆಲ್ ಮಿಷನ್ ಶಾಲೆ ಬಳಿಯ ಹಲವಾರು ಮನೆಗಳೊಳಗೆ ಮಳೆಯ ನೀರು ನುಗ್ಗಿ ನಿವಾಸಿಗಳೆಲ್ಲರೂ ತೊಂದರೆಯನ್ನು ಅನುಭವಿಸಬೇಕಾಗಿ ಬಂದಿದೆ.

ಈ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ 169ಎಯ ಚತುಷ್ಪಥ ಕಾಮಗಾರಿ ಕಳೆದೆರಡು ವರ್ಷಗಳಿಂದ ನಡೆಯುತ್ತಿದ್ದು, ರಸ್ತೆಯನ್ನು ಹಿಂದಿನ ನೆಲಮಟ್ಟದಿಂದ ನಾಲ್ಕೈದು ಅಡಿಗಳಷ್ಟು ಎತ್ತರಿಸಲಾಗಿದೆಯಲ್ಲದೇ ಕಾಮಗಾರಿ ಕುಂಟುತ್ತಾ ಸಾಗಿದ್ದು, ಅಪೂರ್ಣವಾಗಿದೆ. ರಸ್ತೆಯ ಕೆಲಸ ಬಹುತೇಕ ಪೂರ್ಣಗೊಂಡಿ ದ್ದರೂ, ನೀರು ಹರಿಯುವ ಚರಂಡಿಯ ಕೆಲಸ ಇನ್ನೂ ಆರಂಭವಾಗದೇ ಇದ್ದು, ನೀರು ಹರಿಯಲು ದಾರಿಯಿಲ್ಲದೆ ತಗ್ಗು ಪ್ರದೇಶದಲ್ಲಿರುವ ಅಕ್ಕಪ ಕ್ಕದ ಮನೆಗಳಿಗೆ ನೀರು ನುಗ್ಗಿದೆ.

ಮನೆಯೊಳಗಿನ ಪಾತ್ರೆಪಗಡಿಗಳು ನೀರಿನಲ್ಲಿ ತೇಲುತ್ತಿವೆ. ಈ ಸಮಸ್ಯೆಯ ಕುರಿತಂತೆ ಪ್ರದೇಶದ ನಿವಾಸಿಗಳು ಬಹು ಹಿಂದೆಯೇ ನಿರ್ಮಾಣ ಕಾಮಗಾರಿ ಕೈಗೊಂಡಿರುವ ಅಭಿಯಂತರರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಗಳು, ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದರೂ ತ್ವರಿತ ಕಾಮಗಾರಿ ನಡೆಯದೆ ಇಲ್ಲಿನ ನಿವಾಸಿಳು ಬವಣೆ ಅನುಭವಿಸುವಂತಾಗಿದೆ.

ಶೀಘ್ರದಲ್ಲೇ ಮುಂಗಾರು ಆಗಮನವಾಗಲಿದ್ದು, ತುರ್ತಾಗಿ ನೀರು ಹರಿಯಲು ವ್ಯವಸ್ಥೆ ಮಾಡಿಕೊಡದಿದ್ದಲ್ಲಿ, ಮಳೆಗಾಲದಲ್ಲಿ ಇಲ್ಲಿನ ಹಲವಾರು ಮನೆಗಳು ನೀರಿನಲ್ಲಿ ಮುಳುಗುವ ಮತ್ತು ಬೀಳುವ ಅಪಾಯವಿದ್ದು, ಹೆದ್ದಾರಿ ಪ್ರಾಧಿಕಾರವು ತಕ್ಷಣ ಸೂಕ್ತ ವ್ಯವಸ್ಥೆಯನ್ನು ಮಾಡಬೇಕಾಗಿದೆ ಎಂದು ಇಲ್ಲಿನ ನಿವಾಸಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News