ಮುತ್ತೂರು: ಕುಡಿಯುವ ನೀರು ಸರಬರಾಜು ವ್ಯವಸ್ಥೆಗೆ ಚಾಲನೆ

Update: 2020-05-17 16:18 GMT

ಮಂಗಳೂರು, ಮೇ 17: ಮುತ್ತೂರು ಗ್ರಾಪಂ ವ್ಯಾಪ್ತಿಯ ತಾರೆಮಾರ್ ಸೈಟ್, ಕುಳವೂರು ಸೈಟ್, ಕುಳವೂರು, ಮುತ್ತೂರು, ಮಾರ್ಗದಂಗಡಿ ಮತ್ತು ಶಾಂತಿಪಲ್ಕೆ ವಸತಿ ಪ್ರದೇಶದವರಿಗೆ 15 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಕುಡಿಯುವ ನೀರು ಪೂರೈಕೆ ವ್ಯವಸ್ಥೆಗೆ ಶಾಸಕ ಡಾ. ಭರತ್ ಶೆಟ್ಟಿ ರವಿವಾರ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ಈವರೆಗೆ ಸ್ಥಳೀಯರು ಫಲ್ಗುಣಿ ನದಿ ನೀರು ಬಳಕೆ ಮಾಡುತ್ತಿದ್ದರು. ಇಲ್ಲಿಗೆ ಶಾಶ್ವತ ಕುಡಿಯುವ ನೀರು ಪೂರೈಕೆ ಗಾಗಿ ಕಳೆದ 30 ವರ್ಷಗಳಿಂದ ಬೇಡಿಕೆ ಇಡಲಾಗಿತ್ತು. ಸದ್ಯ ಇಲ್ಲಿ ಎರಡು ಕೊಳವೆ ಬಾವಿ ಕೊರೆದು ನೀರು ಪೂರೈಕೆಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ ಎಂದರು.

ಈ ಸಂದರ್ಭ ತಾಪಂ ಸದಸ್ಯ ನಾಗೇಶ್ ಶೆಟ್ಟಿ ಮುತ್ತೂರು, ಮುತ್ತೂರು ಗ್ರಾಪಂ ಅಧ್ಯಕ್ಷೆ ನಾಗಮ್ಮ, ಉಪಾಧ್ಯಕ್ಷೆ ಪ್ರಭಾವತಿ, ಸದಸ್ಯರಾದ ತಾರನಾಥ ಕುಲಾಲ್, ಪ್ರವೀಣ್ ಆಳ್ವ, ಜಗದೀಶ ದುರ್ಗಾಕೋಡಿ, ಜೆರಾಲ್ಡ್ ಪಿಂಟೊ, ಪಿಡಿಒ ರಾಜೀವಿ, ಕಾರ್ಯದರ್ಶಿ ವಸಂತಿ, ಗಣೇಶ್ ಪಾಕಾಜೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News