'ಪಟ್ಟಿಯಲ್ಲಿರುವುದು ಬಸ್ ಗಳಲ್ಲ’ ಎಂದು ರಿಜಿಸ್ಟ್ರೇಶನ್ ಸಂಖ್ಯೆ ಟ್ವೀಟ್ ಮಾಡಿ ನಗೆಪಾಟಲಿಗೀಡಾದ ಸಂಬಿತ್ ಪಾತ್ರ

Update: 2020-05-20 16:42 GMT

ಹೊಸದಿಲ್ಲಿ: ವಲಸೆ ಕಾರ್ಮಿಕರನ್ನು ಸಾಗಿಸಲು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವ್ಯವಸ್ಥೆ ಮಾಡಿದ್ದ 1,000 ಬಸ್ ಗಳಲ್ಲಿ ಹಲವು ಆ್ಯಂಬುಲೆನ್ಸ್ ಗಳು, ಕಾರುಗಳು , ಆಟೋಗಳು ಮತ್ತು ಸ್ಕೂಟರ್ ಗಳು ಇವೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ಆರೋಪಿಸಿದ್ದರು.

“ಪ್ರಿಯಾಂಕಾ ವಾದ್ರಾರ ಸೋ ಕಾಲ್ಡ್ ಬಸ್ ಗಳು.. ಇದರಲ್ಲಿ ಕೆಲವು ಅಸಮರ್ಥ… ಕೆಲವು ಆ್ಯಂಬುಲೆನ್ಸ್ ಗಳು, ಕೆಲವು ಕಾರ್ ಗಳು , ಕೆಲವು ಟ್ರಾಕ್ಟರ್ ಗಳು ಮತ್ತು ಸ್ಕೂಟರ್ ಗಳು” ಎಂದು ಟ್ವೀಟ್ ಮಾಡಿದ್ದ ಸಂಬಿತ್ ಕೆಲವು ವಾಹನಗಳ ರಿಜಿಸ್ಟ್ರೇಶನ್ ನಂಬರ್ ಗಳನ್ನು ಬರೆದಿದ್ದರು.

ಇದು  ಬಸ್ ಗಳಲ್ಲ ಎನ್ನುವುದು ಸಂಬಿತ್ ಪಾತ್ರ ಆರೋಪವಾಗಿದ್ದು, ಬಿಜೆಪಿ ನಾಯಕನ ಈ ಟ್ವೀಟ್ 16 ಸಾವಿರ ಬಾರಿ ರಿಟ್ವೀಟ್ ಆಗಿದ್ದರೆ, 53 ಸಾವಿರ ಲೈಕ್ ಗಳು ಲಭಿಸಿವೆ.

ಫ್ಯಾಕ್ಟ್ ಚೆಕ್

ಸಂಬಿತ್ ಪಾತ್ರರ ಈ ಆರೋಪದ ಬಗ್ಗೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ವೆಬ್ ಸೈಟ್ ‘ವಾಹನ್’ ಮೂಲಕ theprint.in  ಫ್ಯಾಕ್ಟ್ ಚೆಕ್ ನಡೆಸಿದೆ. ಪಾತ್ರ ನೀಡಿದ್ದ 6 ರಿಜಿಸ್ಟ್ರೇಶನ್ ಸಂಖ್ಯೆಗಳಲ್ಲಿ 3 ಬಸ್ ಗಳ ರಿಜಿಸ್ಟ್ರೇಶನ್ ಗಳಾಗಿವೆ ಎನ್ನುವುದು ಸಚಿವಾಲಯದ ವೆಬ್ ಸೈಟ್ ನಿಂದ ಸ್ಪಷ್ಟಗೊಂಡಿದೆ.

RJ27PA9852 ರಿಜಿಸ್ಟ್ರೇಶನ್ ನಂಬರ್ ನಲ್ಲಿರುವುದು ಆ್ಯಂಬುಲೆನ್ಸ್ ಎಂದು ಪಾತ್ರ ಆರೋಪಿಸಿದ್ದಾರೆ. ಆದರೆ ಅದು ಬಸ್ ಆಗಿದೆ.

RJ40PA 0186 ರಿಜಿಸ್ಟ್ರೇಶನ್ ನಂಬರ್ ನಲ್ಲಿ ಇರುವುದು ತ್ರಿಚಕ್ರ ವಾಹನ ಎಂದು ಸಂಬಿತ್ ಪಾತ್ರ ಆರೋಪಿಸಿದ್ದರೆ, ವಾಸ್ತವವಾಗಿ ಅದು ಕೂಡ ಬಸ್ ಆಗಿದೆ.

RJ40PA 0123 ಆಟೊ ರಿಕ್ಷಾದ ರಿಜಿಸ್ಟ್ರೇಶನ್ ಎಂದು ಸಂಬಿತ್ ಪಾತ್ರ ಆರೋಪಿಸಿದ್ದರೆ ಅದೂ ಕೂಡ ಬಸ್ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News