ಬೆಳ್ತಂಗಡಿಯ ಮಹಿಳೆಗೆ ಕೊರೋನ ಪಾಸಿಟಿವ್: ಸೋಂಕಿನ ಮೂಲ ನಿಗೂಢ

Update: 2020-05-23 09:07 GMT

ಬೆಳ್ತಂಗಡಿ, ಮೇ 23: ತಾಲೂಕಿನ ಶಿರ್ಲಾಲು ನಿವಾಸಿಯಾದ 38 ವರ್ಷದ ಮಹಿಳೆಯೊಬ್ಬರಿಗೆ ಕೋವಿಡ್ -19 ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಶಿರ್ಲಾಲಿನ ಮಜಲುಪಲ್ಕೆ ಪ್ರದೇಶದ ಏಳು ಮನೆಗಳನ್ನು ಕಂಟೈನ್ಮೆಂಟ್ ವಲಯವೆಂದು ಗುರುತಿಸಲಾಗಿದೆ. 

ಕೊರೋನ ಸೋಂಕಿತ ಮಹಿಳೆಯು ಶಿರ್ಲಾಲಿನ ಮಜಲುಪಲ್ಕೆಯಿಂದ ಕನ್ಯಾಡಿ-1 ಪಡ್ಪು ಎಂಬಲ್ಲಿಯ ಅವರ ಸಂಬಂಧಿಕರ ಮನೆಗೆ ತೆರಳಿದ್ದರೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ತಾಲೂಕು ಆರೋಗ್ಯ ಇಲಾಖೆ ಸಿಬ್ಬಂದಿ ಆ ಮನೆಯ ಎಲ್ಲರನ್ನೂ ಹೋಂ ಕ್ವಾರಂಟೈನ್ ಗೆ ಒಳಪಡಿಸಿದ್ದಾರೆ. ಸೋಂಕಿತ ಮಹಿಳೆಯನ್ನು ಮಂಗಳೂರಿನ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಶಾಸಕ ಹರೀಶ್ ಪೂಂಜಾ, ತಹಶೀಲ್ದಾರ್, ಆರೋಗ್ಯಾಧಿಕಾರಿ ಡಾ.ಕಲಾಮಧು, ಅಳದಂಗಡಿ ಆಸ್ಪತ್ರೆ ವೈದ್ಯೆ ಡಾ.ಚೈತ್ರಾ, ವೇಣೂರು ಎಸ್ಐ ಲೋಲಾಕ್ಷ, ಎಎಸ್ಐ ಜಯಪೂಜಾರಿ ಪೊಲೀಸ್ ಸಿಬ್ಬಂದಿ ಕೃಷ್ಣ ಸ್ಥಳಕ್ಕೆ ತಾಪಂ ಸದಸ್ಯ ಜಯಶೀಲಾ, ಪಿಡಿಒ ರಾಜು, ಗಣಪತಿ, ಪಂಚಾಯತ್ ಸದಸ್ಯರು, ಆಶಾ ಕಾರ್ಯಕರ್ತೆಯರು ಆಗಮಿಸಿ ಪರಿಶೀಲಿಸಿದ್ದಾರೆ.

ಸೋಂಕಿತ ಮಹಿಳೆಗೆ ಯಾವುದೇ ಟ್ರಾವೆಲಿಂಗ್ ಹಿಸ್ಟರಿ ಇಲ್ಲವಾಗಿದ್ದು, ಆದರೂ ರೋಗ ಎಲ್ಲಿಂದ ತಗುಲಿದೆ ಎಂಬುದರ ಬಗ್ಗೆ ಗೊಂದಲ ಮುಂದುವರಿದಿದೆ. ಈ ಮಹಿಳೆ ಕೆಲ ದಿನಗಳಿಂದ ವಿವಿಧೆಡೆ ಓಡಾಟ ನಡೆಸಿರುವ ಮಾಹಿತಿಯೂ ಲಭ್ಯವಾಗುತ್ತಿದೆ. ತಾಲೂಕು ಆಡಳಿತ ಈ ನಿಟ್ಟಿನಲ್ಲಿ ಮಾಹಿತಿ ಕಲೆ ಹಾಕುತ್ತಿದ್ದು ಈ ಪ್ರದೇಶದಲ್ಲಿ ಹೆಚ್ಚಿನ ಜಾಗ್ರತೆ ವಹಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News