ದೇಶದಲ್ಲಿ 7 ರಾಜ್ಯದ 11 ಪಾಲಿಕೆಗಳು ಕೊರೋನಾ ಹಾಟ್‌ಸ್ಪಾಟ್!

Update: 2020-05-24 06:04 GMT

ಹೊಸದಿಲ್ಲಿ, ಮೇ 24:  ದೇಶದ ಏಳು ರಾಜ್ಯಗಳ 11 ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು ಕೊರೋನಾ ಪ್ರಕರಣಗಳ ಶೇಕಡ 90ರಷ್ಟು ಪ್ರಕರಣಗಳು ದಾಖಲಾಗಿದ್ದು, ಕೋವಿಡ್-19 ಹಾಟ್‌ಸ್ಪಾಟ್‌ಗಳು ಎನಿಸಿಕೊಂಡಿವೆ.
ಮಹಾರಾಷ್ಟ್ರ, ತಮಿಳುನಾಡು, ಗುಜರಾತ್, ದೆಹಲಿ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ ಹಾಗೂ ರಾಜಸ್ಥಾನಗಳ 11 ಮಹಾನಗರಗಳಲ್ಲಿ ಅತ್ಯಧಿಕ ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಸಚಿವಾಲಯ ಪ್ರಕಟಿಸಿದೆ. ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 3250 ರೋಗಿಗಳು ಗುಣಮುಖರಾಗಿದ್ದು, ಚೇತರಿಕೆ ದರ 41.39% ಆಗಿದೆ ಎಂದು ಸರ್ಕಾರ ಹೇಳಿದೆ.
ಈ ಹನ್ನೊಂದು ಮಹಾನಗರ ಪಾಲಿಕೆಗಳ ಅಧಿಕಾರಿಗಳ ಜತೆ ಉನ್ನತ ಮಟ್ಟದ ಸಭೆ ನಡೆಸಿದ ಕೇಂದ್ರ ಆರೋಗ್ಯ ಕಾರ್ಯದರ್ಶಿ ಪ್ರೀತಿ ಸುದಾನ್, ಕಂಟೈನ್‌ಮೆಂಟ್ ಪ್ರದೇಶ ಮತ್ತು ಬಫರ್ ಝೋನ್ ಗುರುತಿಸುವ ವೇಳೆ ಪರಿಗಣಿಸಬೇಕಾದ ಅಂಶಗಳ ಬಗ್ಗೆ ಮಾಹಿತಿ ನೀಡಿದರು.
ಯಾವುದೇ ಪ್ರದೇಶವನ್ನು ಕೆಂಪು, ಕಿತ್ತಳೆ ಅಥವಾ ಹಸಿರು ವಲಯಗಳೆಂದು ವರ್ಗೀಕರಿಸುವ ಅಧಿಕಾರವನ್ನು ಕಳೆದ ವಾರ ಕೇಂದ್ರ ಆರೋಗ್ಯ ಸಚಿವಾಲಯ ರಾಜ್ಯಗಳಿಗೆ ವರ್ಗಾಯಿಸಿತ್ತು. ಇದಕ್ಕೂ ಮುನ್ನ ಇಡೀ ಜಿಲ್ಲೆಯಲ್ಲಿ ಈ ಮೂರು ವಲಯಗಳಾಗಿ ಆರೋಗ್ಯ ಸಚಿವಾಲಯ ಗುರುತಿಸುತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News