ಟ್ರಂಪ್ ಟ್ವೀಟ್‍ಗಳಿಗೆ ಟ್ವಿಟರ್ ಲಗಾಮು: ‘ಫ್ಯಾಕ್ಟ್ ಚೆಕ್ ಮಾಡಿ’ ಎಂದು ಟ್ವಿಟರಿಗರಿಗೆ ಸೂಚನೆ

Update: 2020-05-27 11:58 GMT

ನ್ಯೂಯಾರ್ಕ್: ಮೊದಲ ಬಾರಿಗೆಂಬಂತೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ವೀಟ್‍ ಗಳ ಕುರಿತಂತೆ ಟ್ವಿಟರ್ ಫ್ಯಾಕ್ಟ್ ಚೆಕ್ ವಾರ್ನಿಂಗ್ ನೀಡಿದೆ.

ಮೇಲ್-ಇನ್ ಮತಗಳು ‘ವಂಚನೆಯುಕ್ತ' ಎಂದು ಬಣ್ಣಿಸಿದ ಹಾಗೂ ‘ಮೇಲ್ ಪೆಟ್ಟಿಗೆಗಳನ್ನು ಕದಿಯಬಹುದು’ ಎಂದು ಟ್ರಂಪ್ ಮಂಗಳವಾರ ಮಾಡಿದ ಎರಡು ಟ್ವೀಟ್‍ಗಳ ಕುರಿತಂತೆ ಟ್ವಿಟ್ಟರ್ ‘ಎಚ್ಚರಿಕೆ’ಯನ್ನು ಸೇರಿಸಿದೆ.

ಟ್ರಂಪ್ ಅವರ ಟ್ವೀಟ್‍ಗ:ಳ ಕೆಳಗೆ “ಮೇಲ್-ಇನ್ ಮತಗಳ ಕುರಿತ ವಾಸ್ತವಗಳನ್ನು ಅರಿಯಿರಿ” ಎಂಬ ಲಿಂಕ್ ನೀಡಲಾಗಿದ್ದು ಇದು ಟ್ವಿಟರ್ `ಮೂಮೆಂಟ್ಸ್' ಪುಟಕ್ಕೆ ಓದುಗರನ್ನು ಕೊಂಡೊಯ್ದು ಟ್ರಂಪ್ ಅವರ ಆಧಾರರಹಿತ ಹೇಳಿಕೆಗಳ ಕುರಿತಂತೆ ಹಲವು ವರದಿಗಳು ಹಾಗೂ ಸತ್ಯ ಶೋಧನೆಯ ಕುರಿತು ಮಾಹಿತಿ ನೀಡುತ್ತದೆ.

ಟ್ವಿಟ್ಟರ್‍ನ ಈ ಕ್ರಮ ಟ್ರಂಪ್ ಅವರ ಸಹನೆಯನ್ನು ಪರೀಕ್ಷಿಸಿದೆ. “ಟ್ವಿಟ್ಟರ್ ವಾಕ್ ಸ್ವಾತಂತ್ರ್ಯದ ಕತ್ತು ಹಿಚುಕುತ್ತಿದೆ, ಅಧ್ಯಕ್ಷನಾಗಿ ಇದಕ್ಕೆ ನಾನು ಆಸ್ಪದ ನೀಡುವುದಿಲ್ಲ'' ಎಂದು ಅವರು ಟ್ವೀಟ್ ಮಾಡಿದ್ದಾರೆ

ಟ್ರಂಪ್ ಅಧ್ಯಕ್ಷರಾದಂದಿನಿಂದ ಅವರ ಹಲವು ಟ್ವೀಟ್‍ಗಳಿಗೆ ಇತರ ಟ್ವಿಟ್ಟರಿಗರಿಗಿರುವ ನಿಯಮಗಳನ್ನು ಅನ್ವಯಿಸಲು ಒಪ್ಪದೇ ಇದ್ದ ಟ್ವಿಟರ್ ಇದೀಗ ಟ್ರಂಪ್ ಅವರು ಒಂದು ಮಿತಿಯನ್ನು ಮೀರಿದ್ದಾರೆಂದು ಅರಿತು ಅವರ ಟ್ವೀಟ್‍ಗಳಿಗೆ ಲಗಾಮು ಹಾಕಲು ಹೊರಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News