ಆಸ್ಪತ್ರೆ ಸಿಬ್ಬಂದಿಯಲ್ಲಿ ಕೊರೋನ ನಿಗ್ರಹ ಪ್ರತಿಕಾಯ: ಮರುಸೋಂಕಿನಿಂದ ರಕ್ಷಣೆ

Update: 2020-05-27 16:33 GMT

ಪ್ಯಾರಿಸ್, ಮೇ 27: ಲಘು ಮಾದರಿಯ ಕೋವಿಡ್-19 ಸೋಂಕಿಗೆ ಒಳಗಾಗಿರುವ ಬಹುತೇಕ ಎಲ್ಲ ವೈದ್ಯರು ಮತ್ತು ನರ್ಸ್‌ಗಳ ರಕ್ತದಲ್ಲಿ ಪ್ರತಿಕಾಯಗಳು ಉತ್ಪತ್ತಿಯಾಗಿವೆ ಹಾಗೂ ಅವರು ಮತ್ತೊಮ್ಮೆ ಸೋಂಕಿಗೆ ಒಳಗಾಗದಂತೆ ಅವು ತಡೆಯುತ್ತವೆ ಎಂದು ಫ್ರಾನ್ಸ್‌ನಲ್ಲಿ ಆಸ್ಪತ್ರೆ ಸಿಬ್ಬಂದಿ ಮೇಲೆ ನಡೆಸಲಾದ ಅಧ್ಯಯನವೊಂದು ತಿಳಿಸಿದೆ.

160 ಸ್ವಯಂಸೇವಕರನ್ನು ಅಧ್ಯಯನಕ್ಕೆ ಆರಿಸಿಕೊಂಡಿದ್ದು, ಆ ಪೈಕಿ ಒಬ್ಬರನ್ನು ಹೊರತುಪಡಿಸಿ ಉಳಿದ ಎಲ್ಲರಲ್ಲೂ ಸೋಂಕು ಆರಂಭಗೊಂಡ 15 ದಿನಗಳ ಒಳಗೆ ಪ್ರತಿಕಾಯಗಳು ಸೃಷ್ಟಿಯಾಗಿವೆ ಎಂದು ಸ್ಟ್ರಾಸ್‌ಬೋರ್ಗ್‌ನಲ್ಲಿರುವ ಇನ್‌ಸ್ಟಿಟ್ಯೂಟ್ ಪ್ಯಾಶ್ಚರ್ ಮತ್ತು ಯುನಿವರ್ಸಿಟಿ ಹಾಸ್ಪಿಟಲ್ಸ್ ತನ್ನ ಆರಂಭಿಕ ವರದಿಯಲ್ಲಿ ತಿಳಿಸಿದೆ. ಪರೀಕ್ಷೆಗೊಳಗಾದ ಬಹುತೇಕ ಎಲ್ಲ ಸಿಬ್ಬಂದಿಯಲ್ಲೂ ಪ್ರತಿಕಾಯಗಳಿದ್ದವು ಹಾಗೂ ವೈರಸನ್ನು ನಿಷ್ಕ್ರಿಯಗೊಳಿಸುವ ಸಾಮರ್ಥ್ಯವನ್ನು ಅವು ಹೊಂದಿದ್ದವು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News