ಗೌತಮ್ ನವ್ಲಾಖಾರನ್ನು ದಿಲ್ಲಿಯಿಂದ ಮುಂಬೈಗೆ ಕರೆದೊಯ್ದ ಎನ್‍ಐಎಗೆ ಹೈಕೋರ್ಟ್ ತರಾಟೆ

Update: 2020-05-28 11:42 GMT

ಹೊಸದಿಲ್ಲಿ: ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧಿತರಾಗಿರುವ ಸಾಮಾಜಿಕ ಹೋರಾಟಗಾರ ಗೌತಮ್ ನವ್ಲಾಖಾ ಅವರ  ಮಧ್ಯಂತರ ಜಾಮೀನು ಅರ್ಜಿ ಇನ್ನೂ ಬಾಕಿಯಿರುವಾಗಲೇ ಅವಸರದಿಂದ ಅವರನ್ನು ದಿಲ್ಲಿಯಿಂದ ಮುಂಬೈಗೆ ಸ್ಥಳಾಂತರಗೊಳಿಸಿದ ರಾಷ್ಟ್ರೀಯ ತನಿಖಾ ಏಜನ್ಸಿಯನ್ನು ದಿಲ್ಲಿ ಹೈಕೋರ್ಟ್ ಗುರುವಾರ ತರಾಟೆಗೆ ತೆಗೆದುಕೊಂಡಿದೆ.

ದಿಲ್ಲಿಯ ತಿಹಾರ್ ಜೈಲಿನಲ್ಲಿರಿಸಲಾಗಿದ್ದ ನವ್ಲಾಖಾ ಅವರನ್ನು ಮಂಗಳವಾರ ಮುಂಬೈಗೆ ರೈಲಿನಲ್ಲಿ ಕರೆದುಕೊಂಡು ಹೋಗಲಾಯಿತಲ್ಲದೆ ಜೂನ್ 22ರ ತನಕ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಅವರನ್ನು ದಿಲ್ಲಿಯಿಂದ ಮುಂಬೈಗೆ ಕರೆದುಕೊಂಡು ಹೋಗುವ ಬಗ್ಗೆ ತಮಗೆ ಮಾಹಿತಿಯನ್ನೇ ನೀಡಲಾಗಿರಲಿಲ್ಲ ಎಂದು ನಂತರ ನವ್ಲಾಖಾ ಅವರ ಕುಟುಂಬ ಸದಸ್ಯರು ಹಾಗೂ ವಕೀಲರು ಹೇಳಿದ್ದರು.

ಮುಂಬೈ ನ್ಯಾಯಾಲಯವು ನವ್ಲಾಖಾ ವಿರುದ್ಧ ಹಾಜರಿ ವಾರಂಟ್ ಜಾರಿಗೊಳಿಸಿದ್ದರಿಂದ ಅವರನ್ನು ಅಲ್ಲಿಗೆ ಕರೆದುಕೊಂಡು ಹೋಗಲಾಯಿತು ಎಂದು ವಿಶೇಷ ಸಾರ್ವಜನಿಕ ಅಭಿಯೋಜಕ ಪ್ರಕಾಶ್ ಶೆಟ್ಟಿ  ಹೇಳಿದ್ದಾರೆ.

“ಇಲ್ಲಿ ಪ್ರಕರಣ ಬಾಕಿಯಿರುವುದರಿಂದ ಅವರನ್ನು ಅಲ್ಲಿಗೆ ಕರೆದುಕೊಂಡು ಹೋಗಲಾಯಿತು” ಆದರೆ ಅವರನ್ನು ಸ್ಥಳಾಂತರಿಸುವ ಮುನ್ನ ನಮಗೆ ಮಾಹಿತಿ ನೀಡಬೇಕಿತ್ತು ಎಂದು ಅವರ ವಕೀಲರು ಹೇಳಿದ್ದಾರೆ.

ಎಪ್ರಿಲ್ 14ರಂದು ನವ್ಲಾಖಾ ಎನ್‍ಐಎ ಎದುರು ಶರಣಾಗಿದ್ದರೆ ಕಳೆದ ತಿಂಗಳು  ಅವರಿಗೆ ಎಪ್ರಿಲ್ 24ರ ತನಕ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News