ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಅಮೆರಿಕ ಸಂಬಂಧ ಕಡಿದುಗೊಳ್ಳಲಿದೆ ಎಂದ ಟ್ರಂಪ್

Update: 2020-05-30 08:21 GMT

ವಾಷಿಂಗ್ಟನ್,ಮೇ 30:ವಿಶ್ವ ಆರೋಗ್ಯ ಸಂಸ್ಥೆಯು(ಡಬ್ಲುಎಚ್‌ಒ)ನೊವೆಲ್ ಕೊರೋನ ವೈರಸ್‌ನ ಮೊದಲ ಪ್ರಕರಣ ಪತ್ತೆಯಾದ ಚೀನಾದ ಸಂಪೂರ್ಣ ಹಿಡಿತದಲ್ಲಿದೆ ಎಂದು ಆರೋಪಿಸಿದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಡಬ್ಲ್ಯು ಎಚ್‌ಒ ಜತೆಗೆ ತನ್ನ ದೇಶ ಖಾಯಂ ಆಗಿ ಸಂಬಂಧವನ್ನು ಕಡಿದುಕೊಳ್ಳಲಿದೆ ಎಂದು ಶುಕ್ರವಾರ ಇಲ್ಲಿ ಘೋಷಿಸಿದರು.

ಕಳೆದ ತಿಂಗಳು ಡಬ್ಲು ಎಚ್‌ಒಗೆ ಅಮೆರಿಕದ ಕೊಡುಗೆಯನ್ನು ರದ್ದುಪಡಿಸಿದ್ದ ಟ್ರಂಪ್, ಕೊರೋನ ವೈರಸ್‌ನ ಬಗ್ಗೆ ಚೀನಾ ಮಾಹಿತಿಯನ್ನೇ ನೀಡಿರಲಿಲ್ಲ.ಇದನ್ನೇ ಡಬ್ಲುಎಚ್‌ಒ ಪ್ರಚಾರ ಮಾಡಿತ್ತು ಎಂದು ಆರೋಪಿಸಿದ್ದರು. ಈ ಆರೋಪವನ್ನು ಡಬ್ಲುಎಚ್‌ಒ ಅಧಿಕಾರಿಗಳು ನಿರಾಕರಿಸಿದ್ದರು. ನಮ್ಮ ಮಾಹಿತಿ ಪಾರದರ್ಶಕ ಹಾಗೂ ಮುಕ್ತವಾಗಿತ್ತು ಎಂದು ಚೀನಾ ಹೇಳಿಕೊಂಡಿತ್ತು.

ಚೀನಾವು ತನ್ನ ಒಂದು ದೇಶ, ಎರಡು ಪದ್ಧತಿಯ ಬದಲಿಗೆ ಒಂದು ದೇಶ,ಒಂದು ಪದ್ಧತಿಗೆ ಬದಲಾಯಿಸಿದೆ ಎಂದು ಟ್ರಂಪ್ ಹೇಳಿದರು.

ಜಾಗತಿಕ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಡಬ್ಲುಎಚ್‌ಒ ವಿಫಲವಾಗಿದೆ ಎಂದು 10 ದಿನಗಳ ಹಿಂದೆ ಹೇಳಿದ್ದ ಟ್ರಂಪ್ ಅದಕ್ಕೆ ಆರ್ಥಿಕ ನೆರವನ್ನು ನಿರ್ಬಂಧಿಸಿದ್ದರು.

ವಿನಂತಿ ಮಾಡಲಾದ ಹಾಗೂ ಅತ್ಯಗತ್ಯವಿರುವ ಸುಧಾರಣೆಗಳನ್ನು ಮಾಡಲು ವಿಶ್ವಸಂಸ್ಥೆ ವಿಫಲವಾಗಿದೆ. ಹೀಗಾಗಿ ನಾವು ಅದರೊಂದಿಗಿನ ಸಂಬಂಧವನ್ನು ನಾವು ಕೊನೆಗೊಳಿಸುತ್ತಿದ್ದೇವೆ ಎಂದು ಟ್ರಂಪ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News