ಮಧ್ಯಪ್ರದೇಶ ರಾಜಭವನದಲ್ಲಿ ಇನ್ನೂ ಮೂವರಿಗೆ ಕೋವಿಡ್-19 ಸೋಂಕು
Update: 2020-05-30 20:28 IST
ಭೋಪಾಲ,ಮೇ 30: ಮಧ್ಯಪ್ರದೇಶ ರಾಜಭವನ ಆವರಣದ ಇನ್ನೂ ಮೂವರು ನಿವಾಸಿಗಳಲ್ಲಿ ಕೊರೋನ ವೈರಸ್ ಸೋಂಕು ದೃಢಪಟ್ಟಿದ್ದು, ಇದರಿಂದಾಗಿ ಇಲ್ಲಿಯ ನಿವಾಸಿಗಳಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 10ಕ್ಕೇರಿದೆ.
ಎಲ್ಲ ಹತ್ತೂ ಸೋಂಕಿತರು ರಾಜಭವನ ಆವರಣದಲ್ಲಿಯ ಕಂಟೈನ್ಮೆಂಟ್ ರೆನ್‌ಗಳಲ್ಲಿ ವಾಸವಿರುವ ಮೂರು ಕುಟುಂಬಗಳಿಗೆ ಸೇರಿದವರಾಗಿದ್ದಾರೆ. ಈ ಆವರಣದಲ್ಲಿ 190 ಜನರು ವಾಸವಾಗಿದ್ದಾರೆ. ಇತರ 180 ಜನರನ್ನೂ ಕೊರೋನ ವೈರಸ್ ಪರೀಕ್ಷೆಗೆ ಒಳಪಡಿಸಲಾಗಿದ್ದು,ಎಲ್ಲರೂ ನೆಗೆಟಿವ್ ಆಗಿದ್ದಾರೆ. ರಾಜ್ಯಪಾಲ ಲಾಲ್ಜಿ ಟಂಡನ್ ಅವರ ಪರೀಕ್ಷಾ ವರದಿಯೂ ನೆಗೆಟಿವ್ ಆಗಿದೆ.
ರಾಜಭವನ ಆವರಣದಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಸೋಂಕು ಇನ್ನಷ್ಟು ಹರಡದಂತೆ ಅಧಿಕಾರಿಗಳು ಹಲವಾರು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದಾರೆ.