ಮುಂಬೈ ಪೊಲೀಸರಿಗೆ ಸಲ್ಮಾನ್ ಖಾನ್ 1 ಲಕ್ಷ ಸ್ಯಾನಿಟೈಸರ್ ದೇಣಿಗೆ

Update: 2020-05-30 17:34 GMT

ಮುಂಬೈ,ಮೇ 30: ಕೊವೀಡ್-19 ಹಾವಳಿ ನಿಯಂತ್ರಣಕ್ಕಾಗಿ ಹೋರಾಡುತ್ತಿರುವ ಮುಂಬೈ ಪೊಲೀಸರಿಗೆ ಒಂದು ಲಕ್ಷ ಸ್ಯಾನಿಟೈಸರ್‌ಗಳನ್ನು ಬಾಲಿವುಡ್ ನಟ ಸಲ್ಮಾನ್ ಖಾನ್ ವಿತರಿಸಿದ್ದಾರೆ.

ಸಲ್ಮಾನ್ ಅವರು ಇತ್ತೀಚೆಗೆ ಆರಂಭಿಸಿದ,ಅಲಂಕಾರ ಹಾಗೂ ಪ್ರಸಾದನ ಉತ್ಪನ್ನಗಳ ಬ್ರಾಂಡ್ ಫ್ರೆಶ್ ಮೂಲಕ ತಯಾರಿಸಲಾದ ಸ್ಯಾನಿಟೈಸರ್‌ಗಳನ್ನು ಅವರು ದೇಣಿಗೆಯಾಗಿ ನೀಡಿದ್ದಾರೆ.

ಸ್ಯಾನಿಟೈಸರ್‌ಗಳನ್ನು ದಾನ ಮಾಡಿದ್ದಕ್ಕಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಸಲ್ಮಾನ್ ಖಾನ್ ಅವರನ್ನು ಅಭಿನಂದಿಸಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News