ಭಾರತದ ಅತಿ ದೊಡ್ಡ ಸಗಟು ಔಷಧಿ ಮಳಿಗೆ ಜೂ.4ರವರೆಗೆ ಮುಚ್ಚುಗಡೆ

Update: 2020-05-30 17:34 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಮೇ 30: ಭಾರತದ ಅತಿ ದೊಡ್ಡ ಔಷಧಿ ಉತ್ಪನ್ನಗಳ ಸಗಟು ಮಾರುಕಟ್ಟೆ ಭಗೀರಥ್ ಪ್ಯಾಲೇಸ್ ಅನ್ನು ಜೂನ್ 4ರವರೆಗೆ ಮುಚ್ಚುಗಡೆಗೊಳಿಸಲು ಔಷಧ ವ್ಯಾಪಾರಿಗಳು ನಿರ್ಧರಿಸಿದ್ದಾರೆ.

ಕಳೆದ 10 ದಿನಗಳಲ್ಲಿ ಈ ಮಾರುಕಟ್ಟೆ ಪ್ರದೇಶದ ಕನಿಷ್ಠ 12 ಮಂದಿಗೆ ಕೋವಿಡ್ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಅವರು ಈ ಕ್ರಮ ಕೈಗೊಂಡಿದ್ದಾರೆ. ಭಗೀರಥ ಪ್ಯಾಲೇಸ್ ಸಗಟು ಔಷಧಿ ಮಾರುಕಟ್ಟೆಯ ಮುಚ್ಚುಗಡೆಯಿಂದಾಗಿ ಹರ್ಯಾಣ, ರಾಜಸ್ಥಾನ, ಪಂಜಾಬ್ ಹಾಗೂ ಮಹಾರಾಷ್ಟ್ರ ರಾಜ್ಯಗಳು ಬಾಧಿತವಾಗಲಿವೆ ಎಂದು ದಿಲ್ಲಿ ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಆಶೀಶ್ ಗೋವರ್ ತಿಳಿಸಿದ್ದಾರೆ.

ದಿಲ್ಲಿಯ ಭಗೀರಥ ಪ್ಯಾಲೇಸ್ ಸಗಟು ಔಷಧಿ ಮಾರುಕಟ್ಟೆಯಲ್ಲಿ 570ಕ್ಕೂ ಅಧಿಕ ಔಷಧಿ ವ್ಯಾಪಾರಿಗಳಿದ್ದಾರೆ.ಮಾರ್ಚ್ 25ರಿಂದ ಲಾಕ್‌ಡೌನ್ ಜಾರಿಯಲ್ಲಿದ್ದರೂ, ಈ ಮಾರುಕಟ್ಟೆಯು ನಿರಂತರವಾಗಿ ತೆರೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News