​ದ.ಕ.ಜಿಲ್ಲೆ: ಮತ್ತೆ 14 ಮಂದಿಗೆ ಕೊರೋನ ಸೋಂಕು ದೃಢ

Update: 2020-05-31 14:46 GMT

ಮಂಗಳೂರು, ಮೇ 31: ದ.ಕ.ಜಿಲ್ಲೆಯಲ್ಲಿ ರವಿವಾರ ಕೊರೋನ ಸೋಂಕಿನ 14 ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 133ಕ್ಕೇರಿದೆ. ಆ ಪೈಕಿ ದ.ಕ.ಜಿಲ್ಲಾ ಮೂಲದ 127 ಮತ್ತು ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗೆ ಸೇರಿದ 6 ಪ್ರಕರಣಗಳಿವೆ.

ರವಿವಾರ ದೃಢಗೊಂಡ 14 ಪ್ರಕರಣಗಳ ಪೈಕಿ 10 ಪುರುಷರು ಮತ್ತು 3 ಮಹಿಳೆಯರು ಹಾಗೂ ಒಬ್ಬ ಬಾಲಕ ಸೇರಿದ್ದಾರೆ. 14 ಮಂದಿಯ ಪೈಕಿ 1 ಕತರ್, 1 ಮಲೇಶಿಯಾ, 9 ಮಂದಿ ಮುಂಬೈಯಿಂದ ಬಂದವರಾಗಿದ್ದಾರೆ. ಒಬ್ಬ ಬಾಲಕ ಸಹಿತ ಮೂವರಿಗೆ ಪಿ-2287 ಪ್ರಥಮ ಸಂಪರ್ಕದಿಂದ ಸೋಂಕು ದೃಢಗೊಂಡಿವೆ.

ಮೇ 22ರಂದು ಕತರ್‌ನಿಂದ ಬೆಂಗಳೂರಿಗೆ ಬಂದು ಅಲ್ಲೇ 7 ದಿನಗಳ ಕ್ವಾರಂಟೈನ್‌ನಲ್ಲಿದ್ದು, ಶನಿವಾರ ಮಂಗಳೂರಿಗೆ ಬಂದಿದ್ದ 50 ವರ್ಷದ ಗಂಡಸಿಗೆ ರವಿವಾರ ಸೋಂಕಿರುವುದು ದೃಢಗೊಂಡಿವೆ. ಮೇ 22ರಂದು ಮಲೇಶಿಯಾದಿಂದ ಬೆಂಗಳೂರಿಗೆ ಬಂದು ಅಲ್ಲೇ 7 ದಿನಗಳ ಕ್ವಾರಂಟೈನ್‌ನಲ್ಲಿದ್ದು, ಶನಿವಾರ ಮಂಗಳೂರಿಗೆ ಬಂದಿದ್ದ 38 ವರ್ಷದ ಗಂಡಸಿಗೆ ರವಿವಾರ ಸೋಂಕಿರುವುದು ದೃಢಗೊಂಡಿವೆ.

ಮೇ 18ರಂದು ಮುಂಬೈಯಿಂದ ಮಂಗಳೂರಿಗೆ ಆಗಮಿಸಿದ್ದ 22 ವರ್ಷದ ಯುವಕ ಮತ್ತು 50 ಹಾಗೂ 52 ವರ್ಷದ ಗಂಡಸರಿಗೆ ಹಾಗೂ ಅದೇ ದಿನ ಮುಂಬೈಯಿಂದ ಮಂಗಳೂರಿಗೆ 44 ಮತ್ತು 30 ವರ್ಷದ ಇಬ್ಬರು ಗಂಡಸರಿಗೆ ಸೋಂಕು ದೃಢಗೊಂಡಿವೆ. ಮೇ 20ರಂದು ಮುಂಬೈಯಿಂದ ಮಂಗಳೂರಿಗೆ ಆಗಮಿಸಿದ್ದ 45 ಮತ್ತು 43 ವರ್ಷದ ಇಬ್ಬರು ಮಹಿಳೆಯರು, ಮೇ 18ರಂದು ಮುಂಬೈಯಿಂದ ಮಂಗಳೂರಿಗೆ ಆಗಮಿಸಿದ್ದ 40 ವರ್ಷದ ಗಂಡಸು ಮತ್ತು 38 ವರ್ಷದ ಮಹಿಳೆಗೆ ಸೋಂಕು ದೃಢಗೊಂಡಿವೆ. ಕ್ವಾರಂಟೈನ್ ಕೇಂದ್ರದಲ್ಲಿದ್ದ ಇವರನ್ನು ಇದೀಗ ವೆನ್ಲಾಕ್‌ಗೆ ದಾಖಲಿಸಲಾಗಿದೆ.

ಪಿ-2287ರ ಪ್ರಥಮ ಸಂಪರ್ಕದಿಂದ 17 ವರ್ಷ ಪ್ರಾಯದ ಬಾಲಕ ಮತ್ತು 52 ಹಾಗೂ 31 ವರ್ಷದ ವ್ಯಕ್ತಿಗೆ ಸೋಂಕು ದೃಢಗೊಂಡಿದೆ. ಇವರನ್ನು ಕೂಡ ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News