ದ.ಕ. ಜಿಲ್ಲೆ: 14 ಕೊರೋನ ಪಾಸಿಟಿವ್ ಮತ್ತು 106 ನೆಗೆಟಿವ್ ; ಇನ್ನೂ 231 ಮಂದಿಯ ವರದಿ ಬರಲು ಬಾಕಿ

Update: 2020-05-31 14:57 GMT

ಮಂಗಳೂರು, ಮೇ 31: ಕೊರೋನ ವೈರಸ್ ರೋಗಕ್ಕೆ ಸಂಬಂಧಿಸಿ ರವಿವಾರ ಪ್ರಯೋಗಾಲಯದಿಂದ ಸ್ವೀಕರಿಸಲಾದ 120 ವರದಿಗಳ ಪೈಕಿ 14 ಪಾಸಿಟಿವ್ ಮತ್ತು 106 ನೆಗೆಟಿವ್ ಬಂದಿವೆ. ಇನ್ನೂ 231 ಮಂದಿಯ ವರದಿ ಬರಲು ಬಾಕಿ ಇದೆ.

ರವಿವಾರ 37 ಮಂದಿಯ ಗಂಟಲಿನ ದ್ರವವನ್ನು ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ. ಅಲ್ಲದೆ 32 ಮಂದಿಯ ಸ್ಕ್ರೀನಿಂಗ್ ಮಾಡಲಾಗಿದೆ. ಇದರೊಂದಿಗೆ ಈವರೆಗೆ 42,572 ಮಂದಿಯ ಸ್ಕ್ರೀನಿಂಗ್ ಮಾಡಿದಂತಾಗಿದೆ. ಜ್ವರ ಕ್ಲಿನಿಕ್‌ಗಳಲ್ಲಿ ಈವರೆಗೆ 4,509 ಮಂದಿ ತಪಾಸಣೆ ಮಾಡಿಸಿಕೊಂಡಿದ್ದಾರೆ. ಸುರತ್ಕಲ್‌ನ ಎನ್‌ಐಟಿಕೆಯಲ್ಲಿ 3 ಮತ್ತು ಕದ್ರಿಯ ಇಎಸ್‌ಐ ಆಸ್ಪತ್ರೆಯಲ್ಲಿ 17 ಮಂದಿ ಕ್ವಾರಂಟೈನ್ ‌ನಲ್ಲಿದ್ದಾರೆ. 29 ಮಂದಿಯು ನಿಗಾದಲ್ಲಿದ್ದಾರೆ.

ಈವರೆಗೆ 8,947 ಮಂದಿಯ ಗಂಟಲಿನ ದ್ರವವನ್ನು ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಆ ಪೈಕಿ 8,716 ಮಂದಿಯ ವರದಿಯನ್ನು ಸ್ವೀಕರಿಸ ಲಾಗಿದ್ದು, ಅದರಲ್ಲಿ 8,583 ಮಂದಿಯ ವರದಿಯು ನೆಗೆಟಿವ್ ಮತ್ತು 133 ಮಂದಿಯ ವರದಿಯು ಪಾಸಿಟಿವ್ ಬಂದಿದೆ.

ಈವರೆಗೆ ಪತ್ತೆಯಾದ 133 ಪಾಸಿಟಿವ್‌ಗಳ ಪೈಕಿ 56 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರೆ 70 ಮಂದಿ ಕೋವಿಡ್-ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎ.19ರಂದು ಮಹಿಳೆ ಮತ್ತು ಎ.23 ಹಾಗೂ ಎ.30ರಂದು ಇಬ್ಬರು ವೃದ್ಧೆಯರು, ಮೇ 13ರಂದು ಮಹಿಳೆ, ಮೇ 14ರಂದು ವೃದ್ಧೆ ಸಹಿತ ಒಟ್ಟು ಐದು ಮಂದಿ ಮೃತಪಟ್ಟಿದ್ದಾರೆ.

ಮೇ 21ರಂದು 55 ವರ್ಷದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಗಂಟಲ ದ್ರವದ ಪರೀಕ್ಷೆಯಲ್ಲಿ ಕೊರೋನ ಪಾಸಿಟಿವ್ ಪಾಸಿಟಿವ್ ಕಂಡು ಬಂದಿತ್ತು. ಪಿತ್ತಕೋಶದ ಸಮಸ್ಯೆಯಿಂದ ತೀವ್ರ ಅಸ್ವಸ್ಥಗೊಂಡು ವೆನ್ಲಾಕ್ ಆಸ್ಪತ್ರೆಗೆ ಮೇ 23ರಂದು ದಾಖಲಾಗಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಅಂದು ರಾತ್ರಿಯೇ ಸಾವಿಗೀಡಾಗಿದ್ದರು. ಆ ಬಳಿಕ ಬಂದ ಅವರ ಗಂಟಲಿನ ದ್ರವದ ಮಾದರಿಯ ವರದಿಯಲ್ಲಿ ಕೊರೋನ ಪಾಸಿಟಿವ್ ಕಂಡು ಬಂದಿತ್ತು. ಹಾಗಾಗಿ ಜಿಲ್ಲೆಯಲ್ಲಿ ಈವರೆಗೆ ಮೃತಪಟ್ಟವರ ಸಂಖ್ಯೆ 7ಕ್ಕೇರಿದೆ.

ಐಸಿಯುನಲ್ಲಿ ಚಿಕಿತ್ಸೆ: ವೆನ್ಲಾಕ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ 70 ಮಂದಿಯ ಪೈಕಿ 69 ಮಂದಿಯ ಆರೋಗ್ಯ ಸ್ಥಿತಿ ತೃಪ್ತಿಕರವಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. 40 ವರ್ಷದ ಮಹಿಳೆಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇವರು ಮಧುಮೇಹ, ಮೂತ್ರದ ಸೋಂಕು, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ.

12 ಮಂದಿ ಗುಣಮುಖ: ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 76 ವರ್ಷದ ಗಂಡಸು ಸಹಿತ 12 ಮಂದಿ ಗುಣಮುಖರಾಗಿದ್ದು, ರವಿವಾರ ಆಸ್ಪತ್ರೆಯಿಂದ ಡಿಸ್‌ಜಾರ್ಜ್ ಆಗಿದ್ದಾರೆ. ಅದಲ್ಲದೆ 71 ವರ್ಷದ, 50 ವರ್ಷದ, 44 ವರ್ಷದ, 42 ವರ್ಷದ, 40 ವರ್ಷದ, 39 ವರ್ಷದ ಗಂಡಸು ಮತ್ತು 69 ವರ್ಷದ, 41 ವರ್ಷದ, 36 ವರ್ಷದ ಮಹಿಳೆ ಹಾಗೂ 11 ವರ್ಷದ ಬಾಲಕಿ ಮತ್ತು 3 ವರ್ಷದ ಹೆಣ್ಮಗಳು ಡಿಸ್‌ಜಾರ್ಜ್ ಆಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News