ಖಾಸಗಿ ಬಸ್ ಪ್ರಯಾಣದರ ಹೆಚ್ಚಳ: ಯುವ ಕಾಂಗ್ರೆಸ್ ಖಂಡನೆ

Update: 2020-05-31 16:44 GMT

ಉಡುಪಿ, ಮೇ 31: ಉಡುಪಿಯಲ್ಲಿ ಕಳೆದ ಒಂದು ವಾರಗಳ ಕಾಲ ಉಚಿತ ಖಾಸಗಿ ಬಸ್‌ಗಳನ್ನು ಓಡಿಸಿದ ಬಸ್ ಮಾಲಕರು, ಜೂ.1ರಿಂದ ಪ್ರಯಾಣದರ ಹೆಚ್ಚಿಸಿರುವುದು ಖಂಡನೀಯ ಎಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್ ಹೇಳಿದ್ದಾರೆ.

ವಿದ್ಯಾರ್ಥಿಗಳು ಹಾಗೂ ದಿನನಿತ್ಯದ ಪ್ರಯಾಣಿಕರಿಗೆ ನೀಡಲಾಗು ತ್ತಿದ್ದ ರಿಯಾಯತಿ ಪಾಸ್‌ಗಳನ್ನು ಕೂಡ ರದ್ದುಪಡಿಸಿರುವುದರಿಂದ ಇವರೆಲ್ಲ ತೊಂದರೆಗೆ ಒಳಪಡಬೇಕಾಗುತ್ತದೆ. ಹಿಂದಿನ ಕಾಂಗ್ರೆಸ್ ಸರಕಾರದ ಅವಧಿ ಯಲ್ಲಿ ಆರಂಭಿಸಿದ್ದ ನಮ್ ಬಸ್ಸುಗಳು ವಿದ್ಯಾರ್ಥಿಗಳಿಗೆ ಹಾಗೂ ದಿನನಿತ್ಯ ಪ್ರಯಾಣಿಸುವವರಿಗೆ ರಿಯಾಯತಿ ಪಾಸ್ ನೀಡಿದ್ದು ಆ ಬಸ್ಸುಗಳನ್ನು ಖಾಸಗಿ ಬಸ್ಸು ಮಾಲಕರ ಲಾಬಿಗೆ ಮಣಿದು ಜಿಲ್ಲಾಡಳಿತ ಇನ್ನೂ ಕೂಡ ಆರಂಭಿಸಿಲ್ಲ ಎಂದು ಅವರು ದೂರಿದ್ದಾರೆ.

ಪ್ರಯಾಣದರ ಹೆಚ್ಚಿಸಿರುವ ಬಸ್ ಮಾಲಕರು, ಅವರ ಸಿಬಂದಿಗಳ ಸಂಬಳ ವನ್ನು ಕೂಡ ಏರಿಸಬೇಕು. ಪ್ರಯಾಣದರದ ವಿಚಾರದಲ್ಲಿ ಸರಕಾರ ಮತ್ತು ಜಿಲ್ಲಾಡಳಿತ ಸೂಕ್ತ ಮಾರ್ಗದರ್ಶನ ನೀಡಿ ಜನರಿಗೆ ವಿದ್ಯಾರ್ಥಿಗಳಿಗೆ ಸಹಕಾರ ನೀಡಬೇಕು. ನಮ್ ಬಸ್‌ಗಳನ್ನು ಪುನರಾರಂಭಿಸಬೇಕು. ಇಲ್ಲವಾದಲ್ಲಿ ಇದರ ವಿರುದ್ದ ಹೋರಾಟ ನಡೆಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News