ಸಂತ ಆಂತೋನಿ ನೊವೆನಾಕ್ಕೆ ಚಾಲನೆ

Update: 2020-05-31 17:35 GMT

ಮಂಗಳೂರು, ಮೇ 31: ನಗರದ ಜೆಪ್ಪು ಸಂತ ಆಂತೋನಿ ಆಶ್ರಮದ ವತಿಯಿಂದ ಸಂತ ಆಂತೋನಿ ಅವರ ವಾರ್ಷಿಕ ಹಬ್ಬಕ್ಕೆ ರವಿವಾರ ಚಾಲನೆ ನೀಡಲಾಯಿತು.

ಮಂಗಳೂರು ಧರ್ಮಪ್ರಾಂತದ ಶ್ರೇಷ್ಟ ಧರ್ಮಗುರು ಮೊನ್ಸಿಂಜೋರ್ ಮ್ಯಾಕ್ಸಿಂ ನೊರೊನ್ಹಾ ಅವರು ಸಂತ ಆಂತೋನಿಯವರ ಧ್ವಜಾರೋಹಣ ಮಾಡುವ ಮೂಲಕ ತಯಾರಿಯಾಗಿ ಹದಿಮೂರು ದಿನಗಳ ನೊವೆನಾ ಪ್ರಾರ್ಥನೆಗೆ ಚಾಲನೆ ನೀಡಿದರು.

ಈ ಸಂದರ್ಭ ಮಾತನಾಡಿದ ಅವರು, ಧರ್ಮಸಭೆಯು ಇಂದು ಪ್ರೇಷಿತರ ಮೇಲೆ ಪವಿತ್ರಾತ್ಮರು ಇಳಿದು ಬಂದ ಹಬ್ಬವನ್ನು ಆಚರಣೆ ಮಾಡುತ್ತದೆ. ಪವಿತ್ರಾತ್ಮರ ಆಗಮನದೊಂದಿಗೆ ಪ್ರೇಷಿತರು ಧೈರ್ಯ ತುಂಬಿದರು ಮತ್ತು ಸುವಾರ್ತೆ ಸಾರಲು ಮುಂದಾದರು ಎಂದು ಹೇಳಿದರು.

ಆಶ್ರಮದ ನಿರ್ದೇಶಕ ಡಾ. ಒನಿಲ್ ಡಿಸೋಜ, ಸಂಸ್ಥೆಯ ಸಹಾಯಕ ನಿರ್ದೇಶಕರಾದ ಡಾ. ರೋಶನ್ ಡಿಸೋಜ ಹಾಗೂ ಫಾ.ತೃಶಾನ್ ಡಿಸೋಜ ಉಪಸ್ಥಿತರಿದ್ದರು. ಜೂ.13ರ ವರೆಗೆ ಪ್ರತಿ ದಿನ ಬೆಳಗ್ಗೆ 7ಕ್ಕೆ ಕೊಂಕಣಿ ಹಾಗೂ ಸಂಜೆ 7ಕ್ಕೆ ಇಂಗ್ಲೀಷ್‌ನಲ್ಲಿ ಬಲಿಪೂಜೆ, ನೊವೆನಾ ನಡೆಯುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News