​ದ.ಕ. ಜಿಲ್ಲೆಯಲ್ಲಿ ಮಿಡತೆ ಹಾವಳಿ ನಿಯಂತ್ರಣಕ್ಕೆ ಕ್ರಮ :ಕೀಟ ತಜ್ಞರ ಭೇಟಿ

Update: 2020-05-31 17:53 GMT

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ನೂಜಿ ಬಾಳ್ತಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ರೆಂಜಿಲಾಡಿಯ ಹಾಗೂ ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಪ್ರದೇಶದಲ್ಲಿ ಸಂಜೆಯ ವೇಳೆಗೆ ಕಾಣಿಸಿಕೊಂಡಿರುವ ಮಿಡತೆ ಹಿಂಡು ದೇಶದಲ್ಲಿ ಪ್ರವೇಶಿಸಿ ಹಾನಿ ಮಾಡುತ್ತಿರುವ ಮರುಭೂಮಿಯ ಪ್ರದೇಶದಲ್ಲಿ ಕಾಣಿಸಿಕೊಂಡ ಮಿಡತೆಗಳಿಗೆ ಹೋಲಿಕೆ ಇಲ್ಲ. ಆದರೂ ಈ ಬಗ್ಗೆ ರೈತರು ಆತಂಕ ಪಡಬೇಕಾಗಿಲ್ಲ. ಬೆಳೆಗಳಿಗೆ ಹಾನಿ ಉಂಟು ಮಾಡಿದರೆ ಕೃಷಿ ಇಲಾಖೆಯಿಂದ ಶಿಫಾರಸ್ಸು ಮಾಡಿರುವ ಕೀಟ ನಾಶಗಳನ್ನು ಬಳಸುವ ಮೂಲಕ ಅವುಗಳನ್ನು ನಿಯಂತ್ರಿಸ ಬಹುದು ಈ ಬಗ್ಗೆ ಕೀಟ ತಜ್ಞರು ಮಿಡತೆಗಳನ್ನು ಗುರುತಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ಹಗಲಿನಲ್ಲಿ ಮಾತ್ರ ಸಂಚರಿಸುವ ಮಿಡತೆಗಳು:- ಈ ಮಿಡತೆಗಳು ಹಗಲಿನಲ್ಲಿ ಸಂಚರಿಸಿ ರಾತ್ರಿ ವೇಳೆ ಮರಗಿಡಗಳ ಮೇಲೆ ವಿಶ್ರಾಂತಿ ಪಡೆಯು ತ್ತಿವೆ. ಆದುದರಿಂದ ಇವುಗಳನ್ನು ರಾತ್ರಿ ವೇಳೆ ಜೆಟ್ ಸ್ಪ್ರೇಯರ್ ಮೂಲಕ ಕೀಟ ನಾಶಕ ಸಿಂಪಡಿಸಿ ಓಡಿಸಬಹುದಾಗಿದೆ. ಮರಿ ಹುಳುಗಳನ್ನು ಹಿಡಿದು ಹೂಳುವ ಮೂಲಕ ನಿಯಂತ್ರಿಸಬಹುದು. ಜೋರಾದ ಶಬ್ದಗಳ ಮೂಲಕವೂ ಇವುಗಳನ್ನು ಓಡಿಸಬಹುದಾಗಿದೆ. ಬೇವಿನ ಎಲೆಯ ಅಂಶ ವನ್ನು ಹೊಂದಿರುವ ಕೀಟನಾಶಕವನ್ನು ಬೆಳೆಗಳ ಮೇಲೆ ಸಿಂಪಡಿಸುವ ಮೂಲಕ ಬೆಳೆಗಳನ್ನು ರಕ್ಷಿಸಬಹುದು. ಕೀಟಗಳ ಮೇಲೆ ಯೂ ಸಿಂಪಡಿಸಿ ಓಡಿಸಬಹುದಾಗಿದೆ. ಇದಲ್ಲದೆ ದಟ್ಟವಾದ ಹೊಗೆ ಕೀಟ ಭಾದಿತ ಪ್ರದೇಶದಿಂದ ಓಡಿಸಬಹುದು. ಕೀಟನಾಸಕ ಮೆಲಾಥಿಯನ್ ಶೇ 25ನ್ನು ಪ್ರತಿ ಹೆಕ್ಟೇರ್‌ಗೆ 3.7 ಕೆ.ಜಿ ಯಂತೆ ಬಳಸಬಹುದಾಗಿದೆ. ಅದೇ ರೀತಿ ಕ್ಲೋರೋಫೈರಿಫಾಸ್ ಶೇ 20.ಎ.ಸಿ ಯನ್ನು 1.2ಲೀ ಟರ್‌ನಂತೆ ಹಾಗೂ ಇತರ ಶಿಫಾರಸ್ಸು ಮಾಡಿದ ಕೀಟನಾಸಗಳನ್ನು ಪ್ರತಿ ಹೆಕ್ಟೇರ್‌ಗೆ ಬಳಸಬಹುದು ಎಂದು ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News