ಒಂದು ವಾರ ಕಾಲ ದಿಲ್ಲಿ ಗಡಿಗಳು ಬಂದ್,ಕೇವಲ ಅಗತ್ಯ ಸೇವೆಗೆ ಅವಕಾಶ

Update: 2020-06-01 08:49 GMT

 ಹೊಸದಿಲ್ಲಿ, ಜೂ.1: ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಒಂದು ವಾರ ಕಾಲ ದಿಲ್ಲಿಯ ಗಡಿಗಳನ್ನು ಮುಚ್ಚಲಾಗುತ್ತದೆ. ಕೇವಲ ಅಗತ್ಯ ಸೇವೆ ಒದಗಿಸುವ ಜನರಿಗೆ ಹಾಗೂ ಸರಕಾರದ ಇ-ಪಾಸ್‌ಗಳನ್ನು ಹೊಂದಿರುವವರಿಗೆ ಮಾತ್ರ ಗಡಿ ದಾಟಲು ಅವಕಾಶ ನೀಡಲಾಗುತ್ತದೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೋಮವಾರ ಹೇಳಿದ್ದಾರೆ.

ಕೊರೋನ ವೈರಸ್ ಪ್ರಕರಣಗಳ ಹೆಚ್ಚಳವನ್ನು ನಿಭಾಯಿಸಲು ನಗರದ ಆಸ್ಪತ್ರೆಗಳು ಹಾಗೂ ವೈದ್ಯಕೀಯ ಸಂಸ್ಥೆಗಳಿಗೆ ಅವಕಾಶ ನೀಡಲು ಗಡಿಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗುತ್ತ್ತಿದೆ ಎಂದು ಕೇಜ್ರಿವಾಲ್ ವಿವರಿಸಿದರು.

 "ದಿಲ್ಲಿಯಲ್ಲಿ ಕೊರೋನ ಸೋಂಕಿತ ಸಂಖ್ಯೆಯಲ್ಲಿನ ಏರಿಕೆಯಿಂದ ವಿಚಲಿತನಾಗಿದ್ದು, ಇದು ಭಯ ಹುಟ್ಟಿಸಬಾರದು. ಮುಂದಿನ ಒಂದು ವಾರ ದಿಲ್ಲಿಯ ಗಡಿಯನ್ನು ಮುಚ್ಚಲಾಗುತ್ತದೆ. ಅಗತ್ಯ ವಸ್ತುಗಳಿಗೆ ವಿನಾಯಿತಿ ನೀಡಲಾಗಿದೆ. ನಾಗರಿಕರ ಸಲಹೆಗಳನ್ನು ಸ್ವೀಕರಿಸಿದ ಬಳಿಕ ಗಡಿಗಳನ್ನು ತೆರಯುವ ಕುರಿತು ಒಂದು ವಾರ ಬಿಟ್ಟು ಮತ್ತೊಮ್ಮೆ ನಿರ್ಧರಿಸಲಾಗುವುದು" ಎಂದು ಕೇಜ್ರಿವಾಲ್ ತಿಳಿಸಿದರು.

ರಾಷ್ಟ್ರ ರಾಜಧಾನಿಯಲ್ಲಿ ಈ ತನಕ 20,000 ಕೊರೋನ ವೈರಸ್ ಪ್ರಕರಣಗಳು ಪತ್ತೆಯಾಗಿದ್ದು, ವೈರಸ್‌ನಿಂದಾಗಿ 473 ಜನರು ಸಾವನ್ನಪ್ಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News