ವಲಸೆ ಕಾರ್ಮಿಕರಿಗೆ ಆಹಾರದ ವ್ಯವಸ್ಥೆ ಮಾಡುತ್ತಿರುವ 99 ವರ್ಷದ ವೃದ್ಧೆ

Update: 2020-06-01 17:12 GMT

ಹೊಸದಿಲ್ಲಿ: ಕೊರೋನ ವೈರಸ್ ಕಾರಣ ಘೋಷಿಸಲಾದ ಲಾಕ್ ಡೌನ್ ನಿಂದ ಸಾವಿರಾರು ವಲಸೆ ಕಾರ್ಮಿಕರು ಕೆಲಸ ಕಳೆದುಕೊಂಡು, ಹಣವಿಲ್ಲದೆ, ಬೇರೆ ಬೇರೆ ಕಡೆಗಳಲ್ಲಿ ಸಿಲುಕಿ ಕಂಗಾಲಾಗಿದ್ದಾರೆ. ಈ ನಡುವೆ 99 ವರ್ಷದ ವೃದ್ಧೆಯೊಬ್ಬರು ಈ ವಲಸೆ ಕಾರ್ಮಿಕರಿಗಾಗಿ ಆಹಾರದ ವ್ಯವಸ್ಥೆ ಮಾಡಿದ್ದು, ಸಾಮಾಜಿಕ ಜಾಲತಾಣದ ಬಳಕೆದಾರರ ಮನ ಗೆದ್ದಿದ್ದಾರೆ.

ವೈರಲ್ ಆಗಿರುವ ವಿಡಿಯೋದಲ್ಲಿ 99 ವರ್ಷದ ಅಜ್ಜಿ ಅಲ್ಯುಮಿನಿಯಂ ಫಾಯಿಲ್ ನಲ್ಲಿ ರೋಟಿ ಮತ್ತು ಸಬ್ಝಿಯನ್ನು ಮುಂಬೈಯಲ್ಲಿ ಸಿಲುಕಿರುವ ವಲಸೆ ಕಾರ್ಮಿಕರಿಗಾಗಿ ಪ್ಯಾಕ್ ಮಾಡುತ್ತಿರುವುದು ಕಾಣಿಸುತ್ತದೆ.

ಈ ಬಗ್ಗೆ ಟ್ವೀಟ್ ಮಾಡಿದ್ದ ಝಾಹಿದ್ ಇಬ್ರಾಹೀಂ  ಎಂಬವರು, “ಮುಂಬೈಯಲ್ಲಿರುವ ವಲಸೆ ಕಾರ್ಮಿಕರಿಗಾಗಿ 99 ವರ್ಷದ ನನ್ನ ಅತ್ತೆ ಆಹಾರ ಸಿದ್ಧಪಡಿಸುತ್ತಿರುವುದು” ಎಂದು ಬರೆದಿದ್ದಾರೆ. ಝಾಹಿದ್ ಇಬ್ರಾಹೀಂ ಪಾಕಿಸ್ತಾನದ ಸುಪ್ರೀಂ ಕೋರ್ಟ್ ವಕೀಲರಾಗಿದ್ದಾರೆ.

ಝಾಹಿದ್ ಈ ಬಗ್ಗೆ ಟ್ವೀಟ್ ಮಾಡುತ್ತಿದ್ದಂತೆ 99 ವರ್ಷದ ಅಜ್ಜಿಯ ಸೇವೆಯ ಬಗ್ಗೆ ಭಾರೀ ಮೆಚ್ಚುಗೆ ಕೂಡ ವ್ಯಕ್ತವಾಗಿದೆ. ಸಾವಿರಾರು ಮಂದಿ ಅಜ್ಜಿಯ ನಿಸ್ವಾರ್ಥ ಸೇವೆಯನ್ನು ಮೆಚ್ಚಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News