ಹೋಮ್ ಕ್ವಾರಂಟೇನ್ ನಿಯಮ ಉಲ್ಲಂಘಿಸಿದರೆ ಪ್ರಕರಣ ದಾಖಲು: ಉಡುಪಿ ಡಿಸಿ ಜಗದೀಶ್

Update: 2020-06-02 13:57 GMT

ಉಡುಪಿ, ಜೂ.2: ಈಗಾಗಲೇ ಮಹಾರಾಷ್ಟ್ರ ಸೇರಿದಂತೆ ಹೊರರಾಜ್ಯ ದಿಂದ ಬಂದವರ ಕೊರೋನ ಪರೀಕ್ಷಾ ವರದಿ ಬರಲು ಬಾಕಿ ಇದೆ. ಆದುದ ರಿಂದ ಅವರು ಯಾರು ಕೂಡ ಮನೆ ಬಿಟ್ಟು ಹೊರಗಡೆ ಹೋಗಬಾರದು ಮತ್ತು ಯಾರ ಜೊತೆಯೂ ಸಂಪರ್ಕದಲ್ಲಿ ಇರಬಾರದು. ಇದನ್ನು ಮೀರಿ ಹೊರಗಡೆ ಬಂದವರ ಮತ್ತು ಇತರರನ್ನು ಸಂಪರ್ಕ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಲಾಗುವುದೆಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ ನೀಡಿದ್ದಾರೆ.

ಕುಂದಾಪುರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರಕಾರದ ನಿಯಮದಂತೆ ಏಳು ದಿನಗಳಿಂದ ಸರಕಾರಿ ಕ್ವಾರಂಟೇನ್‌ ನಲ್ಲಿ ಇದ್ದವರನ್ನು ಹೋಮ್ ಕ್ವಾರಂಟೇನ್‌ಗೆ ಕಳುಹಿಸಿದ್ದೇವೆ. 14 ದಿನ ಪೂರೈಸಿದ ವರಿಗೆ ಹೋಮ್ ಕ್ವಾರಂಟೇನ್ ಕೂಡ ವಿಧಿಸಿಲ್ಲ. ಪ್ರಯೋಗಾಲಯದ ಕೊರತೆ ಯಿಂದ ಇವರೆಲ್ಲರ ಪರೀಕ್ಷಾ ವರದಿ ವಿಳಂಬವಾಗಿ ಈಗ ಬರುತ್ತಿದೆ. ಆದುದ ರಿಂದ ಪಾಸಿಟಿವ್ ಬಂದವರನ್ನು ಆಸ್ಪತ್ರೆಗೆ ದಾಖಲಿಸುತ್ತಿದ್ದೇವೆ ಎಂದರು.

ಪಾಸಿಟಿವ್ ಬಂದವರ ಮನೆಯ ಸುತ್ತಮುತ್ತಲಿನ ಮನೆಗಳಿರುವ ಪ್ರದೇಶ ವನ್ನು ಸೀಲ್‌ಡೌನ್ ಮಾಡಲಾಗುತ್ತಿದೆ. ಅಲ್ಲಿ ಯಾರು ಒಳಗೆ ಮತ್ತು ಹೊರ ಗಡೆ ಬಾರದಂತೆ ಕ್ರಮ ತೆಗೆದುಕೊಳ್ಳಲಾಗಿದೆ. ಸಾರ್ವಜನಿಕರು ಸೀಲ್‌ಡೌನ್ ಪ್ರದೇಶಕ್ಕೆ ಯಾವುದೇ ಕಾರಣಕ್ಕೂ ಭೇಟಿ ನೀಡಬಾರದು. ಅಲ್ಲಿಗೆ ಭೇಟಿ ನೀಡು ವುದು ಕಾನೂನು ಉಲ್ಲಂಘನೆಯಾಗುವುದರಿಂದ ಅಂತಹವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಅವರು ತಿಳಿಸಿದರು.

ಈ ಕಾಯಿಲೆ ಸಮುದಾಯಕ್ಕೆ ಹರಡದಂತೆ ತಡೆಯುವುದು ಜಿಲ್ಲಾಡಳಿತದ ಮುಖ್ಯ ಉದ್ದೇಶವಾಗಿದೆ. ಆದುದರಿಂದ ಕಂಟೇನ್‌ಮೆಂಟ್ ವಲಯದ ಅಗತ್ಯ ಇದ್ದು, ಸಾರ್ವಜನಿಕರು ಕೆಲವು ದಿನಗಳ ಕಾಲ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News