ಆಟಗಾರರಿಗೆ ಕಣ್ಣಿನ ಟೆಸ್ಟ್ ಕಡ್ಡಾಯಗೊಳಿಸಿದ ಬಂಗಾಳ ಕ್ರಿಕೆಟ್

Update: 2020-06-02 18:25 GMT

ಕೋಲ್ಕತಾ, ಜೂ.2: ಕ್ರಿಕೆಟ್ ಅಸೋಸಿಯೇಶನ್ ಆಫ್ ಬಂಗಾಳ (ಸಿಎಬಿ) ತನ್ನ ಆಟಗಾರರಿಗೆ ಕಣ್ಣಿನ ಪರೀಕ್ಷೆಯನ್ನು ಕಡ್ಡಾಯಗೊಳಿಸಿದೆ.

‘‘ಬಂಗಾಳದ ಎಲ್ಲ ಕ್ರಿಕೆಟ್ ಆಟಗಾರರಿಗೆ ಕಣ್ಣಿನ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗುವುದು’’ ಎಂದು ಸಿಎಬಿ ಪ್ರಕಟನೆೆ ತಿಳಿಸಿದೆ. ಸೋಮವಾರ ನಡೆದ ಬಂಗಾಳ ಕೋಚಿಂಗ್ ಸಿಬ್ಬಂದಿ ಮತ್ತು ಸಿಎಬಿ ಪದಾಧಿಕಾರಿಗಳ ಸಭೆಯ ನಂತರ ಆಟಗಾರರಿಗೆ ಕಣ್ಣಿನ ಪರೀಕ್ಷೆಯನ್ನು ಬಂಗಾಳದ ಮುಖ್ಯ ಕೋಚ್ ಅರುಣ್ ಲಾಲ್ ಪ್ರಸ್ತಾಪಿಸಿದರು ಎಂದು ತಿಳಿದುಬಂದಿದೆ. ಅದರಲ್ಲೂ ವಿಶೇಷವಾಗಿ ಹೊಸ ಚೆಂಡನ್ನು ಎದುರಿಸಲು ಬ್ಯಾಟ್ಸ್‌ಮನ್‌ಗಳಿಗೆ ಈ ಪರೀಕ್ಷೆ ಲಾಭವಾಗಲಿದೆ ಎಂದು ಲಾಲ್ ಅಭಿಪ್ರಾಯಪಟ್ಟರು.

 ‘‘ದೃಷ್ಟಿ ಬಹಳ ಮುಖ್ಯವಾದ ಅಂಶವಾಗಿದ್ದು, ಇದು ಪ್ರತಿವರ್ತನಕ್ಕೆ ಸಂಬಂಧಿಸಿದಂತೆ ದೊಡ್ಡ ಪಾತ್ರವನ್ನು ವಹಿಸುತ್ತದೆ. ಆದ್ದರಿಂದ, ನಾವು ಯಾವುದೇ ಅವಕಾಶಗಳನ್ನು ತೆಗೆದುಕೊಳ್ಳಲು ಬಯಸುವುದಿಲ್ಲ ’’ಎಂದು ಸಿಎಬಿ ಅಧ್ಯಕ್ಷ ಅವಿಶೇಕ್ ದಾಲ್ಮಿಯಾ ಹೇಳಿದರು. ಆದರೆ ಏತನ್ಮಧ್ಯೆ ತರಬೇತಿಯನ್ನು ಪುನರಾರಂಭಿಸಲು ಯಾವುದೇ ದಿನಾಂಕವನ್ನು ಅಂತಿಮಗೊಳಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News