ಕೋವಿಡ್-19: ಭಾರತದಲ್ಲಿ ಎರಡು ಲಕ್ಷ ದಾಟಿದ ಸೋಂಕಿತರ ಸಂಖ್ಯೆ

Update: 2020-06-03 03:52 GMT

ಹೊಸದಿಲ್ಲಿ, ಜೂ.3: ಭಾರತದಲ್ಲಿ ಕೋವಿಡ್-19 ವೈರಸ್ ಸೋಂಕಿತರ ಸಂಖ್ಯೆ ಮಂಗಳವಾರ ಎರಡು ಲಕ್ಷದ ಗಡಿ ದಾಟಿದೆ. ದೇಶದಲ್ಲಿ ಸಾರಿಗೆ ಮತ್ತು ವಹಿವಾಟು ಬಹುತೇಕ ಮರು ಆರಂಭವಾದ ಬೆನ್ನಲ್ಲೇ ಕೇವಲ 15 ದಿನಗಳಲ್ಲಿ ಸೋಂಕಿತರ ಸಂಖ್ಯೆ ದುಪ್ಪಟ್ಟಾಗಿರುವುದು ಆತಂಕಕ್ಕೆ ಕಾರಣವಾಗಿದೆ. ನಗರ ಪ್ರದೇಶಗಳ ಗಡಿದಾಟಿದ ಸಾಂಕ್ರಾಮಿಕ ಹೊಸ ಪ್ರದೇಶಗಳಲ್ಲೂ ತಲೆ ಎತ್ತಿದೆ.

ಜಾಗತಿಕವಾಗಿ ಸಾರ್ಸ್‌-ಸಿಓವಿ-2 ಸೋಂಕಿತರ ಸಂಖ್ಯೆ 64 ಲಕ್ಷ ದಾಟಿದ್ದು, ಒಟ್ಟು 3.8 ಲಕ್ಷ ಮಂದಿಯನ್ನು ಬಲಿ ಪಡೆದಿದೆ. ಭಾರತದಲ್ಲಿ 5,753 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಪ್ರಕರಣಗಳ ಸಾವಿನ ದರ ಭಾರತದಲ್ಲಿ 2.8% ಇದ್ದು, ಜಾಗತಿಕ ಸರಾಸರಿ (5.9%) ಗೆ ಹೋಲಿಸಿದರೆ ಇದು ಕಡಿಮೆ. ಭಾರತದಲ್ಲಿ ಶೇಕಡ 25ರಷ್ಟು ಪ್ರಕರಣಗಳು ಕಳೆದ ಒಂದು ವಾರದಲ್ಲಿ ವರದಿಯಾಗಿವೆ.

ಭಾರತದಲ್ಲಿ ಸೋಂಕಿತರ ಸಾವಿನ ದರ 2.82% ಇದ್ದು ಜಾಗತಿಕ ಸಾವಿನ ದರ 6.13% ಇದೆ. ಸಕಾಲಿಕವಾಗಿ ಪ್ರಕರಣಗಳನ್ನು ಪತ್ತೆ ಮಾಡುವ ಮೂಲಕ ಹಾಗೂ ಸೂಕ್ತ ಕ್ಲಿನಿಕಲ್ ನಿರ್ವಹಣೆ ಮೂಲಕ ಸಾವಿನ ಸಂಖ್ಯೆ ನಿಯಂತ್ರಿಸುವಲ್ಲಿ ಸಾಧ್ಯವಾಗಿದೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್‌ವಾಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News