ಪ್ರತಿಯೊಬ್ಬ ವಲಸಿಗ ಕಾರ್ಮಿಕನಿಗೆ 10,000 ರೂ. ನೀಡಿ: ಕೇಂದ್ರಕ್ಕೆ ಮಮತಾ ಬ್ಯಾನರ್ಜಿ ಆಗ್ರಹ

Update: 2020-06-03 07:59 GMT

ಕೋಲ್ಕತಾ, ಜೂ.3: ಪ್ರತಿಯೊಬ್ಬ ವಲಸಿಗ ಕಾರ್ಮಿಕನಿಗೂ ತಲಾ 10,000 ರೂ. ಒದಗಿಸುವಂತೆ ಕೇಂದ್ರ ಸರಕಾರವನ್ನು ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಒತ್ತಾಯಿಸಿದ್ದಾರೆ.

ಈ ಕುರಿತು ಬುಧವಾರ ಟ್ವೀಟ್ ಮಾಡಿದ ಮಮತಾ, ಲಾಕ್‌ಡೌನ್‌ನಿಂದ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಅಸಂಘಟಿತ ವಲಯಕ್ಕೆ ಆರ್ಥಿಕ ನೆರವನ್ನು ನೀಡಲೇಬೇಕಾಗಿದೆ. ಪ್ರಧಾನಮಂತ್ರಿ ಕೇರ್ಸ್ ಫಂಡ್‌ನ ಒಂದು ಭಾಗವನ್ನು ಈ ಉದ್ದೇಶಕ್ಕೆ ಬಳಸಬೇಕು ಎಂದು ಸಲಹೆ ನೀಡಿದರು.

ಈಗಿನ ಕೊರೋನ ವೈರಸ್ ಸಾಂಕ್ರಾಮಿಕ ಕಾಯಿಲೆಯಿಂದಾಗಿ ಜನರು ಊಹಿಸಲು ಸಾಧ್ಯವಾಗದಷ್ಟು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಅಸಂಘಟಿತ ವಲಯದಲ್ಲಿರುವ ಜನರೂ ಸೇರಿದಂತೆ ವಲಸೆ ಕಾರ್ಮಿಕರಿಗೆ ಒಂದು ಕಂತಿನ ನೆರವಿನ ಭಾಗವಾಗಿ ತಲಾ 10,000ರೂ. ವರ್ಗಾಯಿಸುವಂತೆ ಕೇಂದ್ರ ಸರಕಾರವನ್ನು ನಾನು ವಿನಂತಿಸಿಕೊಳ್ಳುತ್ತೇನೆ. ಪಿಎಂ ಕೇರ್ಸ್ ಫಂಡ್‌ನ್ನು ಇದಕ್ಕಾಗಿಯೇ ಬಳಸಬೇಕೆಂದು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News