ರಾಷ್ಟ್ರ ರಾಜಧಾನಿಯಲ್ಲಿ ವಾಯುಗುಣಮಟ್ಟ ಅತ್ಯಂತ ಕಳಪೆ: ಸಮೀಕ್ಷೆಯಲ್ಲಿ ಶೇ.57 ಮಂದಿ ಅಭಿಪ್ರಾಯ

Update: 2020-06-04 16:15 GMT

ಹೊಸದಿಲ್ಲಿ, ಜೂ.4: ದಿಲ್ಲಿ-ಎನ್‌ಸಿಆರ್ ಪ್ರದೇಶದಲ್ಲಿ ವಾಯು ಗುಣಮಟ್ಟ ಕೆಟ್ಟ ದಾಗಿದೆ ಅಥವಾ ಅತ್ಯಂತ ಕೆಟ್ಟದಾಗಿದೆ ಎಂದು ಅಲ್ಲಿನ ಶೇ.57ರಷ್ಟು ನಿವಾಸಿಗಳು ಅಭಿಪ್ರಾಯಿಸಿದ್ದಾರೆ.

ಶ್ವಾಸಕೋಶ ಪಾಲನೆ ಪ್ರತಿಷ್ಠಾನ ಎಂಬ ಎನ್‌ಜಿಓ ಸಂಸ್ಥೆ ಹಾಗೂ ಅಮೆರಿಕ ರಾಯಭಾರ ಕಚೇರಿ ಜಂಟಿಯಾಗಿ ಈ ಸಮೀಕ್ಷೆಯನ್ನು ಆಯೋಜಿಸಿತ್ತು.

  ‘ಸಾಫ್ ಹವಾ ಔರ್ ನಾಗರಿಕ್ (ಶಾನ್) ಎಂಬ ಯೋಜನೆಯ ಅಂಗವಾಗಿ ನಡೆದ ಈ ಸಮೀಕ್ಷೆಯಲ್ಲಿ ವಿವಿಧ ವರ್ಗಗಳ ಸುಮಾರು 1757 ಮಂದಿ ಭಾಗವಹಿಸಿದ್ದರು.

ವಾಯುಮಾಲಿನ್ಯವು ತಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆಯೆಂದು ಶೇ.82.2 ಮಂದಿಗೆ ಅರಿವಿದೆ. ಕಳೆದ ಒಂದು ವರ್ಷದಲ್ಲಿ ಉಸಿರಾಟದ ತೊಂದರೆಯಿಂದಾಗಿ ತಾವು ಅಥವಾ ತಮ್ಮ ಕುಟುಂಬದ ಸದಸ್ಯರು ಆಸ್ಪತ್ರೆಗೆ ಭೇಟಿ ನೀಡಿದ್ದಾಗಿ ಶೇ.38.8 ಮಂದಿ ಹೇಳಿದ್ದಾರೆ.

  ಆದಾಗ್ಯೂ ವಾಯುಮಾಲಿನ್ಯದ ಹಿನ್ನೆಲೆಯಲ್ಲಿ ದಿಲ್ಲಿ ಸರಕಾರವು ಘೋಷಿಸಿರುವಕೇವಲ 3.14 ಶೇಕಡ ಮಂದಿಗೆ ಮಾತ್ರ ಅರಿವಿದೆಯೆಂದು ಸಮೀಕ್ಷಾ ವರದಿ ತಿಳಿಸಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ.80 ಮಂದಿಗೆ ವಾಯುಮಾಲಿನ್ಯ ಗುಣಮಟ್ಟದ ಸೂಚ್ಯಂಕದ ಬಗ್ಗೆ ಅರಿವಿಲ್ಲವೆಂದು ಹೇಳಿದ್ದಾರೆ. ಕೇಂದ್ರ ಸರಕಾರದ ‘ರಾಷ್ಟ್ರೀಯ ಪರಿಶುದ್ಧ ವಾಯು ಕಾರ್ಯಕ್ರಮ’ದ ಬಗ್ಗೆ ಶೇ.78.8 ಮಂದಿಗೆ ಮಾಹಿತಿಯಿಲ್ಲವೆಂದು ಈ ಸಮೀಕ್ಷೆಯಿಂದ ಬೆಳಕಿಗೆ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News