ಮಂಗಳೂರು: ಜೂ.8ರಂದು ಹೆಚ್ಚಿನ ಸುರಕ್ಷತೆಯೊಂದಿಗೆ ಫೋರಂ ಫಿಝಾ ಮಾಲ್ ಪುನರಾರಂಭ

Update: 2020-06-05 11:16 GMT

ಮಂಗಳೂರು, ಜೂ.5: ಕೊರೋನ ಲಾಕ್ಡೌನ್ ಹಿನ್ನೆಲೆಯಲ್ಲಿ ಮುಚ್ಚಲ್ಪಟ್ಟಿದ್ದ ಫೋರಂ ಫಿಝಾ ಮಾಲ್ ಜೂ.8ರಿಂದ ಹೆಚ್ಚಿನ ಸುರಕ್ಷತಾ ಕ್ರಮಗಳೊಂದಿಗೆ ಪುನಾರಂಭಗೊಳ್ಳಲಿದೆ.

ನಗರದ ಪ್ರೆಸ್ ಕ್ಲಬ್ ನಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಫೋರಂ ಮಾಲ್ ನ ಜನರಲ್ ಮ್ಯಾನೇಜರ್ ಅರವಿಂದ ಶ್ರೀ ವಾಸ್ತವ, ಗ್ರಾಹಕರ ಅನುಕೂಲಕ್ಕಾಗಿ ಅವರ ಕೈ ತಗಲುವ ಹಲವು ಟಚ್ ಪಾಯಿಂಟ್‌ ಗಳೊಂದಿಗೆ ಸುರಕ್ಷಿತ ಅಂತರ ವಿಚಾರದಲ್ಲಿ ಹಲವು ಮಾರ್ಗಸೂಚಿಗಳನ್ನು ಅನುಸರಿಸಲಾಗುವುದು ಎಂದರು.

ಮುಖಕ್ಕೆ ಮಾಸ್ಕ್, ಪ್ರವೇಶದ್ವಾರದಲ್ಲಿ ಸ್ಯಾನಿಟೈಸರ್ ಬಳಸುವುದು ಕಡ್ಡಾಯವಾಗಿರಲಿದೆ. ಮಾಲ್ ಪ್ರವೇಶಿಸುವ ಮುನ್ನ ಗ್ರಾಹಕರನ್ನು ಥರ್ಮಲ್ ಸ್ಕ್ಯಾನಿಂಗ್ ಗೆ ಒಳಪಡಿಸಲಾಗುವುದು. ಜತೆಯಲ್ಲಿ ಅವರಲ್ಲಿ ಆರೋಗ್ಯ ಸೇತು ಆಪ್ ಇದೆಯೇ ಎಂದು ಖಚಿತ ಪಡಿಸಲಾಗುತ್ತದೆ ಎಂದು ಅವರು ಹೇಳಿದರು.

ಸದ್ಯದ ವಾತಾವರಣದಲ್ಲಿ ಒಟ್ಟು ಪ್ರವೇಶದ ಮೂರನೇ ಒಂದರಷ್ಟು ಜನರಿಗೆ ಮಾತ್ರ ವೆ ಪ್ರವೇಶ ದೊರೆಯಲಿದೆ. ಗ್ರಾಹಕರು www.forummalls.com ವೆಬ್ಸೈಟ್ ಗೆ ಭೇಟಿ ನೀಡಿ ಪಾಸ್ ಪಡೆದು ಕ್ಯುಆರ್ ಕೋಡ್ ಇರುವ ಸಮಯವನ್ನು ನಿಗದಿ ಮಾಡಿಕೊಂಡು ಒಳಗೆ ಹೊರಗೆ ಹೋಗುವ ವ್ಯವಸ್ಥೆ ಇದೆ. ಇದು ಸೋಮವಾರದಿಂದ ಕಾರ್ಯಾರಂಭಿಸಲಿದೆ.

ಲಿಫ್ಟ್ ಪ್ರದೇಶದಲ್ಲಿ ಸುರಕ್ಷಿತ ಅಂತರ ಕಾಪಾಡಲು ಗ್ರಾಹಕ ನಿಲ್ಲುವ ಜಾಗಕ್ಕೆ ಮಾರ್ಕ್ ಮಾಡಲಾಗಿದೆ. ಕ್ಯಾಶ್ ಕೌಂಟರ್, ಕೈ ತಗಲುವ ಎಕ್ಸ್ ಲೇಟರ್ , ಕಾರ್ಡ್ ಸ್ವೈಪಿಂಗ್ ಮಿಶಿನ್, ಕುಳಿತುಕೊಳ್ಳುವ ಜಾಗಗಳು, ಸಾಮಾಜಿಕ ಕೈ ಚೀಲಗಳು, ಟ್ರಾಲಿಗಳು , ಮೊದಲಾದವುಗಳನ್ನು ಪ್ರತಿ ಅಂಗಡಿಗಳು ಸ್ಯಾನಿಟೈಸ್ ಮಾಡಲಿವೆ ಎಂದು ಅವರು ಹೇಳಿದರು.

ಸಿನೆಮಾ,  ಗೇಮಿಂಗ್ ವಲಯಕ್ಕೆ ಇನ್ನೂ ಅನುಮತಿ ದೊರಕಿಲ್ಲ. ಒಟ್ಟಿನಲ್ಕಿ ಸರಕಾರದ ಮಾರ್ಗಸೂಚಿಯಂತೆ ಗ್ರಾಹಕರ ಸುರಕ್ಷತೆಗೆ ಪ್ರಮುಖ ಅದ್ಯತೆ ನೀಡಿ ಫೋರಂ ಮಾಲ್ ಪುನರಾರಂಭಗೊಳ್ಳಲಿದೆ ಎಂದು ಮಾರುಕಟ್ಟೆ ಮ್ಯಾನೇಜರ್ ಸುನೀಲ್ ಮಾಹಿತಿ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ವೇಣು ಶರ್ಮ ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News