ಸಲ್ ಸಬೀಲ್ ಫ್ರೆಂಡ್ಸ್ ವತಿಯಿಂದ ಗೂಡಿನಬಳಿ ಸಾಹಸಿಗರಿಗೆ ಸನ್ಮಾನ

Update: 2020-06-05 07:34 GMT

ಪಾಣೆಮಂಗಳೂರು, ಜೂ.5: ಇತ್ತೀಚೆಗೆ ಆತ್ಮಹತ್ಯೆಗೈಯಲೆಂದು ನೇತ್ರಾವತಿ ನದಿಗೆ ಹಾರಿದ ಕಲ್ಲಡ್ಕದ ಯುವಕ ನಿಶಾಂತ್ ಎಂಬವರನ್ನು ಪ್ರಾಣದ ಹಂಗು ತೊರೆದು ರಕ್ಷಿಸಲೆತ್ನಿಸಿದ ಗೂಡಿನಬಳಿಯ ಸಾಹಸಿ ಯುವಕರನ್ನು ಸಲ್ ಸಬೀಲ್ ಫ್ರೆಂಡ್ಸ್ ದುಬೈ ಹಾಗೂ ಅಕ್ಕರಂಗಡಿ ದಾರುಲ್ ಇಸ್ಲಾಂ ಹಿರಿಯ ಪ್ರಾಥಮಿಕ ಶಾಲೆಯ ಜಂಟಿ ಆಶ್ರಯದಲ್ಲಿ ಇತ್ತೀಚೆಗೆ ಸನ್ಮಾನಿಸಲಾಯಿತು.

ದಾರುಲ್ ಇಸ್ಲಾಂ ಶಾಲೆಯ ಮುಖ್ಯಶಿಕ್ಷಕ ಹಮೀದ್ ಕೆ. ಮಾಣಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಜೀಪ ನಡು ಜುಮಾ ಮಸೀದಿಯ ಖತೀಬ್ ಅಬೂ ಸ್ವಾಲಿಹ್ ಫೈಝಿ ಅಕ್ಕರಂಗಡಿ ಮುಖ್ಯ ಅತಿಥಿಯಾಗಿದ್ದರು.

ಇದೇ ಸಂದರ್ಭ ಗೂಡಿನಬಳಿ ಸಾಹಸಿ ಯುವಕರಾದ ಆರಿಫ್ ಹೈವೇ, ಮುಶ್ತಾಕ್, ಯೂನುಸ್ ಅಕ್ಕರಂಗಡಿಯವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಪಿಎಫ್‌ಐ ದ.ಕ. ಜಿಲ್ಲಾಧ್ಯಕ್ಷ ಇಜಾಝ್ ಅಹ್ಮದ್ ನೆಹರೂ ನಗರ, ಸ್ಥಳೀಯ ಮಸೀದಿ ಅಧ್ಯಕ್ಷ ಅಬ್ದುಲ್ ಹಮೀದ್ ಬಾವುಂಞಿ, ಸ್ಥಳೀಯ ಅಕ್ಕರಂಗಡಿಯ ಕೌನ್ಸಿಲರ್ ಇದ್ರೀಸ್ ಪಿ.ಜೆ., ಸಲ್ ಸಬೀಲ್ ಫ್ರೆಂಡ್ಸ್ ದುಬೈ ಇದರ ಕಾರ್ಯಕರ್ತರಾದ ಶಮೀರ್ ಆಲಡ್ಕ, ಮಂದಿ ಹೌಸ್ ಮಾಲಕ ಅಝೀಂ, ಜಬ್ಬಾರ್ ಐಡಿಯಲ್, ಅಮೀರ್, ಅಶ್ಫಾಕ್ ಮತ್ತಿತರರು ಉಪಸ್ಥಿತರಿದ್ದರು.

ನೂರುದ್ದೀನ್ ಮಾಸ್ಟರ್ ಗೂಡಿನಬಳಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಲ್ ಸಬೀಲ್ ಫ್ರೆಂಡ್ಸ್ ದುಬೈ ಇದರ ಕಾರ್ಯಕರ್ತ ತಸ್ಲೀಂ ನಝರ್ ವಂದಿಸಿದರು. ಆರಿಫ್ ಅಕ್ಕರಂಗಡಿ ಕಿರಾಅತ್ ಪಠಿಸಿದರು.

ಕಾರ್ಯಕ್ರಮದ ಬಳಿಕ ಆತ್ಮಹತ್ಯೆಗೈದ ನಿಶಾಂತ್ ಅವರ ಮನೆಗೆ ಭೇಟಿ ನೀಡಿ ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News