ಕೊರೋನ ಹಾವಳಿ ಹಿನ್ನೆಲೆ: ಜುಮಾ ನಮಾಝ್ ಇಲ್ಲದ 11ನೆ ‘ಶುಕ್ರವಾರ’

Update: 2020-06-05 09:59 GMT

ಮಂಗಳೂರು, ಜೂ.5: ಕೊರೋನ ವೈರಸ್ ಸೋಂಕು ತಡೆಗಟ್ಟುವ ಸಲುವಾಗಿ ಮಸೀದಿಗಳಲ್ಲಿ ಸಾಮೂಹಿಕವಾಗಿ ನಮಾಝ್ ನಿರ್ವಹಿಸದಂತೆ ರಾಜ್ಯ ಸರಕಾರ, ಜಿಲ್ಲಾಡಳಿತದ ಮನವಿಗೆ ಸ್ಪಂದಿಸಿ ಖಾಝಿಗಳ ನಿರ್ದೇಶನದಂತೆ ಜೂ.5ರ ‘ಶುಕ್ರವಾರ’ ಮಧ್ಯಾಹ್ನವೂ ಜುಮಾ ನಮಾಝ್ ನಿರ್ವಹಿಸದೆ ಮುಸ್ಲಿಮರು ತಮ್ಮ ಮನೆಗಳಲ್ಲೇ ಲುಹರ್ ನಮಾಝ್ ಮಾಡಿದರು. ಆ ಮೂಲಕ ಸತತ 11 ಶುಕ್ರವಾರ ಜುಮಾ ನಮಾಝ್‌ನಿಂದ ವಂಚಿತರಾದರು.

ಮಾ.27 ಮತ್ತು ಎ.3, ಎ.10, ಎ.17, ಎ.24 ಹಾಗೂ ಮೇ 1, ಮೇ 8, ಮೇ 15, ಮೇ 22, ಮೇ 29ರ ‘ಶುಕ್ರವಾರ’ವನ್ನು ಜುಮಾ ನಮಾಝ್ ಇಲ್ಲದೆ ಕಳೆದಿದ್ದ ಮುಸ್ಲಿಮರು ಜೂ.5ರ 11ನೆ ಶುಕ್ರವಾರ ಕೂಡ ಜುಮಾ ನಮಾಝ್ ನಿರ್ವಹಿಸದೆ ಸರಕಾರದ ನಿಯಮಾವಳಿಯನ್ನು ಪಾಲಿಸಿದರು.

ದ.ಕ. ಜಿಲ್ಲೆಯ ಯಾವುದೇ ಮಸೀದಿಗಳಲ್ಲಿ ಶುಕ್ರವಾರ ಜುಮಾ ನಮಾಝ್ ಇರಲಿಲ್ಲ. ಮಸೀದಿಗಳ ಇಮಾಮ್ ಮತ್ತು ಮುಅದ್ಸಿನ್ ಹಾಗೂ ಇತರ ಸಿಬ್ಬಂದಿ ವರ್ಗವು ಮಸೀದಿಯಲ್ಲಿ ಮತ್ತು ಸಮುದಾಯದ ಇತರರು ಮನೆಯಲ್ಲಿ ಲುಹರ್ ನಮಾಝ್ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News