​ಪೋರ್ಟ್ ವಾರ್ಡ್: ಸೊಳ್ಳೆಪರದೆ-ಮಾಸ್ಕ್ ವಿತರಣೆ

Update: 2020-06-05 12:51 GMT

ಮಂಗಳೂರು, ಜೂ.5: ನಗರದ 45ನೇ ಪೋಡ್ ವಾರ್ಡ್‌ಗೆ ಒಳಪಟ್ಟ ನಾಗರಿಕರಿಗೆ ಸೊಳ್ಳೆ ಪರದೆ ಹಾಗೂ ಮಾಸ್ಕ್ ವಿತರಿಸುವ ಕಾರ್ಯಕ್ರಮವು ಸಂತ ಅರ್ಸುಲ ಅಂಗನವಾಡಿ ಕೇಂದ್ರದಲ್ಲಿ ಇತ್ತೀಚೆಗೆ ನಡೆಯಿತು.

ಸ್ಥಳೀಯ ನಗರ ಪಾಲಿಕೆ ಸದಸ್ಯ ಅಬ್ದುಲ್ಲತೀಫ್‌ರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ರೋಗ ವಾಹಕಗಳ ನಿಯಂತ್ರಣ ಅಧಿಕಾರಿ ಡಾ.ನವೀನ್‌ಚಂದ್ರ ಕುಲಾಲ್, ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಅನುಪಮಾ ಪಿ., ನಗರಪಾಲಿಕೆಯ ಆರೋಗ್ಯ ಇಲಾಖೆಯ ವಿನಾಯಕ, ಸಿಬ್ಬಂದಿಗಳಾದ ಹೇಮಾವತಿ, ಸುಧಾ, ರೊಸಾರಿಯೊ ಪ್ರೌಢಶಾಲೆಯ ಮುಖ್ಯಶಿಕ್ಷಕ ಅಲೋಶಿಯಸ್ ಡಿಸೋಜ, ಸಮಿತಿಯ ಸದಸ್ಯರಾದ ಪ್ರದೀಪ್ ಶೆಟ್ಟಿ, ಕವಿತಾ, ಮುನೀರ್, ಅನುಪಮಾ, ಗುಣಾವತಿ ಶೆಟ್ಟಿ ಹಾಗೂ ಸ್ಥಳೀಯ ಅಂಗನವಾಡಿ ಕಾರ್ಯಕರ್ತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News