ಬಹುಜನರ ಅಪೇಕ್ಷೆಯ ಮೇರೆಗೆ ಕಾಂಚನ ಹೋಂಡಾ ವತಿಯಿಂದ ಬೃಹತ್ ಸಾಲ ಮತ್ತು ವಿನಿಮಯ ಮೇಳ

Update: 2020-06-05 14:21 GMT

ಮಂಗಳೂರು, ಜೂ.5: ವಾಹನ ಮಾರಾಟ ಮತ್ತು ಸೇವೆಯಲ್ಲಿ ಅನುಭವ ಹೊಂದಿದ್ದು, ಹಲವು ವರ್ಷಗಳಿಂದ ಕರಾವಳಿಯಾದ್ಯಂತ ಗ್ರಾಹಕರಿಗೆ ತೃಪ್ತಿದಾಯಕ ಸೇವೆ ನೀಡುತ್ತಿರುವ ಕಾಂಚನ ಮೋಟಾರ್ಸ್‌ನ ಅಂಗಸಂಸ್ಥೆಯಾದ ಕಾಂಚನ ಹೋಂಡಾ ಸಂಸ್ಥೆಯು ದ.ಕ. ಜಿಲ್ಲೆಯಲ್ಲಿ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಅತೀ ಹೆಚ್ಚಿನ ಪಾಲು ಹೊಂದಿರುತ್ತದೆ. ಇದೀಗ ಬಹುಜನರ ಅಪೇಕ್ಷೆಯ ಮೇರೆಗೆ ಕಾಂಚನ ಹೋಂಡಾ ವತಿಯಿಂದ ಬೃಹತ್ ಸಾಲ ಮತ್ತು ವಿನಿಮಯ ಮೇಳ ಮಾಡಲು ಸಂಸ್ಥೆಯು ಸಜ್ಜಾಗಿದೆ. ತಮ್ಮ ಗ್ರಾಹಕರ ಸುರಕ್ಷತೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಯಾಣಿಸಲು ಹೋಂಡಾ ದ್ವಿಚಕ್ರ ವಾಹನವನ್ನು ಖರೀದಿಸಲು ಕಾಂಚನ ಹೋಂಡಾ ಸುವರ್ಣಾವಕಾಶ ಕಲ್ಪಿಸಿದೆ.

ಜೂ.8ರಿಂದ 13ರವರೆಗೆ ಮಂಗಳೂರಿನ ಕಂಕನಾಡಿ, ಕಾವೂರು- ಶಾಂತಿನಗರ, ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿ, ಬಿಸಿ ರೋಡ್-ಕೈಕಂಬ, ಸಿದ್ಧಕಟ್ಟೆ-ಸಂಗಬೆಟ್ಟು, ಮಾಣಿ-ಬುಡೋಳಿ, ವಿಟ್ಲದ ಶೋರೂಂಗಳಲ್ಲಿ ನಡೆಸಲಾಗುತ್ತಿದೆ. ಈಗಾಗಲೇ ಹೋಂಡಾ ಸಂಸ್ಥೆಯಿಂದ ಹೊಸ BS6 ತಂತ್ರಜ್ಞಾನದೊಂದಿಗೆ ಬಿಡುಗಡೆಯಾದ ಹೋಂಡಾ ಆಕ್ಟಿವಾ 125, ಆಕ್ಟಿವಾ 6G, Dio, Shine, SP 125, Unicorn, CD 110 ಸಾಯ್ಲೆಂಟ್ ಸ್ಟಾಟ್‌ನಿಂದ ಪ್ರಶಂಸೆಗೆ ಪಾತ್ರವಾಗಿದೆ. ಹಾಗೆಯೇ ಶೇ.10ರಿಂದ 16ರವರೆಗೆ ಮೈಲೇಜ್ ಜಾಸ್ತಿ ಸಿಗುತ್ತದೆ ಎಂದು ಗ್ರಾಹಕರು ಸಂತಸ ವ್ಯಕ್ತಪಡಿಸಿದ್ದಾರೆ.

ಮೆಗಾ ಮಾನ್ಸೂನ್ ಆಫರ್ ಪ್ರಯುಕ್ತ ಪ್ರತಿ ಖರೀದಿಯ ಮೇಲೆ ಹೋಂಡಾ ಝೀಲ್ ರೈನ್ ಕೋಟ್/ಹೋಂಡಾ ಹೆಲ್ಮೆಟ್/ ಫುಲ್ಟ್ಯಾಂಕ್ ಪೆಟ್ರೋಲ್ ಉಚಿತವಾಗಿ ನೀಡಲಾಗುವುದು. ದ.ಕ. ಜಿಲ್ಲೆಯ ಎಲ್ಲಾ ಸೆಕೆಂಡ್‌ಹ್ಯಾಂಡ್ ಡೀಲರ್‌ಗಳ ಉಪಸ್ಥಿತಿಯೊಂದಿಗೆ ನಿಮ್ಮ ಹಳೆಯ ದ್ವಿಚಕ್ರ ವಾಹನಗಳಿಗೆ ಅತಿ ಹೆಚ್ಚಿನ ವಿನಿಮಯ ದರ ನೀಡಲಾಗುವುದು ಎಂದು ಸಂಸ್ಥೆಯು ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News