ಸಂಚಾರಕ್ಕೆ ಸಿದ್ಧಗೊಂಡ ಗುರುಪುರ ನೂತನ ಸೇತುವೆ

Update: 2020-06-05 17:43 GMT

ಮಂಗಳೂರು,ಜೂ.5: ರಾಷ್ಟ್ರೀಯ ಹೆದ್ದಾರಿ 169 ರಲ್ಲಿ ಗುರುಪುರ ನದಿಗೆ ಸುಮಾರು 40ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಸೇತುವೆ ಸಂಚಾರಕ್ಕೆಸಿದ್ಧಗೊಂಡಿದೆ.

ಲೋಕಾರ್ಪಣೆಗೆ ತಯಾರಾಗಿರುವ ಈ ನೂತನ ಸೇತುವೆಯ ಅಂತಿಮ ಹಂತದ ಕಾಮಗಾರಿಗಳನ್ನು ಸಂಸದರಾದ ನಳಿನ್ ಕುಮಾರ್ ಕಟೀಲ್ ಇಂದು ಭೇಟಿ ನೀಡಿ ವೀಕ್ಷಿಸಿದರು. ಈ ಸಂದರ್ಭದಲ್ಲಿ ಶಾಸಕ ಡಾ.ವೈ ಭರತ್ ಶೆಟ್ಟಿ ಜೊತೆಗಿದ್ದರು.

ಎರಡೂ ಕಡೆ ಸೇತುವೆಯ ಅಗಲ 16 ಮೀ. ಸೇತುವೆ ರಸ್ತೆ ಅಗಲ 11 ಮೀ., ಕಾಲುದಾರಿ ಅಗಲ 2.50 ಮೀ., ಫೈಲ್‌ ಫೌಂಡೇಶನ್‌, ಮೇಲ್ಕಟ್ಟಡಕ್ಕೆ ಪಿಎಸ್‌ಸಿ ಗರ್ಡರ್‌ ಬೀಮ್‌ ಮತ್ತು ಸ್ಪ್ಯಾಬ್‌, ಎರಡೂ ಕಡೆ  ತಲಾ 500 ಮೀ. ಉದ್ದದ ಸಂಪರ್ಕ ರಸ್ತೆ ಕಾಮಗಾರಿ ಅಂತಿಮ ಹಂತದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News