ಕಾಸರಗೋಡು: ಶುಕ್ರವಾರ ಒಬ್ಬರಿಗೆ ಕೋವಿಡ್ 19 ಸೋಂಕು ದೃಢ

Update: 2020-06-05 18:30 GMT

ಕಾಸರಗೋಡು: ಜಿಲ್ಲೆಯಲ್ಲಿ ಶುಕ್ರವಾರ ಒಬ್ಬರಿಗೆ ಕೋವಿಡ್ 19 ಸೋಂಕು ಪಾಸಿಟಿವ್ ಆಗಿದೆ. 7 ಮಂದಿ ರೋಗದಿಂದ ಗುಣಮುಖರಾಗಿದ್ದಾರೆ.  ಮಹಾರಾಷ್ಟ್ರದಿಂದ ಆಗಮಿಸಿದ್ದ ಪಡನ್ನ ಗ್ರಾಮಪಂಚಾಯತ್ ನಿವಾಸಿ 39 ವರ್ಷದ ವ್ಯಕ್ತಿಗೆ ರೋಗ ಖಚಿತವಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ಜಿಲ್ಲೆಯಲ್ಲಿ ಈಗ ಒಟ್ಟು 103 ಮಂದಿ ಕೋವಿಡ್ ಸೋಂಕು ಖಚಿತಗೊಂಡವರಿದ್ದಾರೆ.

ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದ 6 ಮಂದಿ, ಕಾಞಂಗಾಡ್ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ  ದಾಖಲಾಗಿದ್ದ ಒಬ್ಬರು ರೋಗದಿಂದ ಗುಣಮುಖರಾಗಿದ್ದಾರೆ. ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದ ಮಧೂರು ಗ್ರಾಮಪಂಚಾಯತ್ ನಿವಾಸಿ 38 ವರ್ಷದ ವ್ಯಕ್ತಿ, 23 ವರ್ಷದ ಕೋಡೋಂ-ಬೇಳೂರು ನಿವಾಸಿ, ಮಂಗಲ್ಪಾಡಿ ಗ್ರಾಮಪಂಚಾಯತ್ ನಿವಾಸಿಗಳಾದ 28.40 ವರ್ಷದ ವುಯಕ್ತಿಗಳು, ಪೈವಳಿಕೆ ನಿವಾಸಿಗಳದ 37 ವರ್ಷದ ವ್ಯಕ್ತಿ, ಕುಂಬಳೆ ನಿವಾಸಿ 54 ವರ್ಷದ ವ್ಯಕ್ತಿಗಳು, ಕಾಞಂಗಾಡ್ ಜಿಲ್ಲಾ ಆಸ್ಪತ್ರೆ ಯಲ್ಲಿ ದಾಖಲಾಗಿದ್ದ ಉದುಮಾ ನಿವಾಸಿ 38 ವರ್ಷದ ಮಹಿಳೆ ರೋಗದಿಂದ ಗುಣಮುಖರಾದವರು.    

ಜಿಲ್ಲೆಯಲ್ಲಿ ಒಟ್ಟು 3727 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ 3040 ಮಂದಿ, ಆಸ್ಪತ್ರೆಗಳಲ್ಲಿ 687 ಮಂದಿ ನಿಗಾದಲ್ಲಿದ್ದಾರೆ. 710 ಮಂದಿಯ ಗಂಟಲರಸ ತಪಾಸಣೆಗೆ ಕಳುಹಿಸಲಾಗಿದೆ. 441 ಮಂದಿ ಶುಕ್ರವಾರ ತಮ್ಮನಿಗಾ ಅವಧಿ ಪೂರ್ಣಗೊಳಿಸಿದ್ದಾರೆ. 228 ಮಂದಿಯನ್ನು ನೂತನವಾಗಿ ಐಸೊಲೇಷನ್ ವಾರ್ಡಿಗೆ ದಾಖಲಿಸಲಾಗಿದೆ.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News