ಪುತ್ತೂರು ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರಕ್ಕೆ ಮಾಜಿ ಸಚಿವ ಬಿ. ರಮಾನಾಥ ರೈ ಭೇಟಿ

Update: 2020-06-05 18:31 GMT

ಪುತ್ತೂರು: ಕರ್ನಾಟಕ ರಾಜ್ಯದ  ಅರಣ್ಯ ಮತ್ತು ಪರಿಸರ ಖಾತೆಯ ಮಾಜಿ ಸಚಿವ ಬಿ.ರಮಾನಾಥ ರೈಯವರು ಪುತ್ತೂರಿನಲ್ಲಿರುವ ಗೇರು ಸಂಶೋಧನಾ ನಿರ್ದೇಶನಾಲಯಕ್ಕೆ ಶುಕ್ರವಾರ ಭೇಟಿ ನೀಡಿ ಗೇರು ಬೆಳೆಯ ಬಗ್ಗೆ ಮುಖ್ಯವಾಗಿ  ಹೊಸ ಹೈಬ್ರಿಡ್ ತಳಿ (ಹೆಚ್- ೧೩೦) ಯ ಬಗ್ಗೆ ಹಾಗೂ ಅತಿ ಸಾಂದ್ರ ಪದ್ಧತಿಯ  ಬಗ್ಗೆ ಹೆಚ್ಚಿನ ಮಾಹಿತಿ ಪಡೆದರು.

ಕೇಂದ್ರದ ವಿವಿಧ ತಾಕುಗಳಿಗೆ ಭೇಟಿ ನೀಡಿ ತೋಟಗಳನ್ನು ಪರಿಶೀಲನೆ ನಡೆಸಿದರು ಮತ್ತು ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕ ಡಾ. ಎಂ. ಗಂಗಾಧರ್ ನಾಯಕ್  ಹಾಗೂ ಹಿರಿಯ ವಿಜ್ಞಾನಿ ಡಾ. ಶಂಶುದ್ದೀನ್ ಮಾಹಿತಿ ಒದಗಿಸಿದರು.  ಸಚಿವ ರಮಾನಾಥ ರೈ ಅವರು 600 ಗಿಡಗಳನ್ನು ಖರೀದಿಸಿ, ಆಧುನಿಕ ಕೃಷಿ ಮಾಡುವುದಾಗಿ ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News