ಪ್ರಾಕೃತಿಕ ವಿಕೋಪ: ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯಿಂದ ತುರ್ತು ಸೇವಾ ತಂಡಕ್ಕೆ ಚಾಲನೆ

Update: 2020-06-06 05:22 GMT

ಬಂಟ್ವಾಳ: ಎಸ್ಸೆಸ್ಸೆಫ್ ಕನ್ನಡ ಜಿಲ್ಲಾ ಸಮಿತಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಬ್ಲಡ್ ಸೈಬೋ ವತಿಯಿಂದ ಮಳೆಗಾಲದಲ್ಲಿ ಉಂಟಾಗುವ ಪ್ರಾಕೃತಿಕ ವಿಕೋಪದಿಂದ ಉಂಟಾಗುವ ಹಾನಿಗಳಿಗೆ ಸ್ಪಂದಿಸಲು ಜಿಲ್ಲಾ ಮಟ್ಟದಲ್ಲಿ ಸೇವಾ ನಿರತ ತಂಡಕ್ಕೆ ಬಿ.ಸಿ ರೋಡ್ ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಸಭಾಂಗಣದಲ್ಲಿ ಶುಕ್ರವಾರ ಸಂಜೆ ನಡೆದ ಬ್ಲಡ್ ಸೈಬೋ ಡಿವಿಶನ್ ಉಸ್ತುವಾರಿಗಳ ವಿಶೇಷ ಸಭೆಯಲ್ಲಿ ಚಾಲನೆ ನೀಡಲಾಯಿತು.

ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಇಬ್ರಾಹಿಂ ಸಖಾಪಿ ಸೆರ್ಕಳ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಜಿಲ್ಲಾ ಕೋಶಾಧಿಕಾರಿ ಮುಹಮ್ಮದ್ ಅಲೀ ತುರ್ಕಳಿಕೆ ಸಭೆಯನ್ನು ಉದ್ಘಾಟಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಬ್ಲಡ್ ಸೈಬೋ ಚೇರ್ಮೇನ್ ತೌಸೀಫ್ ಸ‌ಅದಿ ಹರೇಕಳ ಹಾಗೂ ಪೈಝಲ್ ಝುಹ್ರಿ ಕಲ್ಲುಗುಂಡಿ ವಿಷಯ ಮಂಡಿಸಿದರು. ಸಭೆಯಲ್ಲಿ ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಎಂ.ಶರೀಫ್ ಬೆರ್ಕಳ, ಕಾರ್ಯದರ್ಶಿ ರಫೀಕ್ ಸುರತ್ಕಲ್, ಸದಸ್ಯರಾದ ನವಾಝ್ ಸಖಾಪಿ ಅಡ್ಯಾರ್‌ಪದವು, ಆರಿಪ್ ಝುಹ್ರಿ ಮುಕ್ಕ ಉಪಸ್ಥಿತರಿದ್ದರು.

ಬ್ಲಡ್ ಸೈಬೋ ಜಿಲ್ಲಾ ಜನರಲ್ ಕನ್ವೀನರ್ ಅಬ್ದುಲ್ ರಶೀದ್ ವಗ್ಗ ಸ್ವಾಗತಿಸಿ, ಜಿಲ್ಲಾ ಬ್ಲಡ್ ಸೈಬೋ ಕೋ-ಓರ್ಡಿನೇಟರ್ ಕರೀಂ ಕದ್ಕಾರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News