ದಂತವೈದ್ಯ ಡಾ.ಮುರಲೀಮೋಹನ್ ಚೂಂತಾರು ಅವರ ‘ಸಂಕಲ್ಪ-2020’ ಪುಸ್ತಕ ಬಿಡುಗಡೆ

Update: 2020-06-06 10:14 GMT

ಮಂಗಳೂರು, ಜೂ. 6: ದಂತವೈದ್ಯ ಡಾ. ಮುರಲೀಮೋಹನ್ ಚೂಂತಾರು ಅವರು ಬರೆದ ‘ಸಂಕಲ್ಪ-2020’(ಕೋವಿಡ್-19, ಆರೋಗ್ಯ ಮಾರ್ಗದರ್ಶಿ) ಪುಸ್ತಕ ಬಿಡುಗಡೆ ಸಮಾರಂಭ ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ನಡೆಯಿತು.

ಪುಸ್ತಕ ಬಿಡುಗಡೆಗೊಳಿಸಿದ ವಿಧಾನಪರಿಷತ್ ಮಾಜಿ ಸದಸ್ಯ ಗಣೇಶ್ ಕಾರ್ಣಿಕ್ ಮಾತನಾಡಿ, ಜನಸಾಮಾನ್ಯರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವೈರಾಣು ಆಯಾಮ ಪರಿಚಯಿಸಲು ಸಂಕಲ್ಪ ಪುಸ್ತಕ ನೆರವಾಗುತ್ತದೆ. ಕೊರೋನ ಪ್ರತಿಯೊಬ್ಬರಲ್ಲೂ ಸಾಮಾಜಿಕ ಜವಾಬ್ದಾರಿ ಹೆಚ್ಚಿಸಿದೆ. ನಮ್ಮ ರಕ್ಷಣೆ ನಾವೇ ಮಾಡಬೇಕು ಎಂಬ ಜಾಗೃತಗೊಳಿಸುತ್ತಿದೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರು ಹೊಸ ರೀತಿಯ ಆಲೋಚನೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೊರೋನಕ್ಕೆ ವೈದ್ಯಕೀಯ ಸವಾಲು ಕಣ್ಣಮುಂದಿರುವಾಗ ಜನಜಾಗೃತಿ ಮೂಡಿಸುವಲ್ಲಿ ಈ ಪುಸ್ತಕ ನೆರವಾಗಲಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ ಮಾತನಾಡಿ, ಚೂಂತಾರು ಅವರು ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಸಂಕಲ್ಪ ಪುಸ್ತಕ ಬರೆದಿದ್ದಾರೆ. ವೈಜ್ಞಾನಿಕ ಪರಿಪೂರ್ಣ ಅರ್ಥ ಈ ಪುಸ್ತಕ ಒಳಗೊಂಡಿದೆ ಎಂದರು.

ಇದೇ ವೇಳೆ ಐಎಂಎ ರಾಜ್ಯ ಶಾಖೆ ಉಪಾಧ್ಯಕ್ಷ ಡಾ. ಜಿ.ಕೆ. ಭಟ್ ಸಂಕಬಿತ್ತಿಲು, ಲೇಖಕ, ವೈದ್ಯ ಡಾ. ಮುರಲೀಮೋಹನ್ ಚೂಂತಾರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News