​ಹೂಹಾಕುವ ಕಲ್ಲು: ಉಚಿತ ಆಯುಷ್ ಔಷಧಿ ವಿತರಣೆ

Update: 2020-06-06 16:02 GMT

ಮುಡಿಪು, ಜೂ.6: ವಿಶ್ವ ಪರಿಸರ ದಿನಾಚರಣೆ, ಕೊರೊನಾ ತಡೆ ಜಾಗೃತಿ, ರೋಗ ನಿರೋಧಕ ಶಕ್ತಿ ವೃದ್ಧಿಸುವ ಮತ್ತು ವೈರಾಣು ಸೋಂಕು ತಡೆಯುವ ಆಯುಷ್ ಔಷಧಿ ವಿತರಣಾ ಅಭಿಯಾನವು ಹೂಹಾಕುವಕಲ್ಲು ದ.ಕ.ಜಿ.ಪಂ. ಉನ್ನತೀಕರಿಸಿದ ಹಿ.ಪ್ರಾ. ಶಾಲೆಯಲ್ಲಿ ನಡೆಯಿತು.

ದೇರಳಕಟ್ಟೆಯ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು, ಆಯುಷ್ ಇಲಾಖೆ, ಜನ ಶಿಕ್ಷಣ ಟ್ರಸ್ಟ್, ಬಾಳೆಪುಣಿ ಗ್ರಾಪಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸೆಲ್ಕೋ ಫೌಂಡೇಶನ್‌ನ ಸಹಭಾಗಿತ್ವದಲ್ಲಿ ಶುಕ್ರವಾರ ನಡೆದ ಅಭಿಯಾನಕ್ಕೆ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ಫಾ.ರೋಶನ್ ಕ್ರಾಸ್ತಾ ಚಾಲನೆ ನೀಡಿದರು.

ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ. ಶಿವಪ್ರಸಾದ್, ಕಮ್ಯೂನಿಟಿ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ.ಸಾಜನ್, ಯೋಗ ಮತ್ತು ಪ್ರಕೃತಿ ಚಿಕಿತ್ಸಾ ವಿಭಾಗದ ಡಾ. ಹವ್ಯಾಶ್ರೀ, ಆಯುಷ್ ಆರೋಗ್ಯ ಗ್ರಾಮ ಅಭಿಯಾನ ಕುರಿತು ಜಿಲ್ಲಾ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ ಮಾಹಿತಿ ನೀಡಿದರು.

ಕಾಲೇಜಿನ ಉಪ ಪ್ರಾಂಶುಪಾಲ ಡಾ. ಪ್ರಭುಕಿರಣ್, ವೈದ್ಯರಾದ ಡಾ. ಸೂರಜ್, ಡಾ. ಧೀರಜ್, ಡಾ. ಸೆಬೆಸ್ಟಿಯನ್, ಆಯುಷ್ ಇಲಾಖೆಯ ಹಿರಿಯ ವೈದ್ಯಾಧಿಕಾರಿ ಡಾ. ಸೈಯದ್ ಜಾವಿದ್, ಉದ್ಯಮಿ ಲಯನ್ ರಮೇಶ ಶೇಣವ, ಗ್ರಾಪಂ ಸದಸ್ಯ ಜನಾರ್ದನ್ ಕುಲಾಲ್, ಎಸ್‌ಡಿಎಂಸಿ ಅಧ್ಯಕ್ಷ ನವೀನ ಚಂದ್ರ, ಮುಖ್ಯ ಶಿಕ್ಷಕಿ ಜಯಲಕ್ಷ್ಮಿ, ಸೆಲ್ಕೋ ವ್ಯವಸ್ಥಾಪಕ ರವೀನ, ಗ್ರಾಪಂ ಲೆಕ್ಕ ಸಹಾಯಕ ರುಕ್ಮಣ್‌ದಾಸ್, ಮಾಜಿ ಅಧ್ಯಕ್ಷ ಚಂದ್ರಶೇಖರ್ ಆಳ್ವ ಮತ್ತಿತರರು ಸಹಕರಿಸಿದ್ದರು. ಕೃಷ್ಣ ಮೂಲ್ಯ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News