ಉಡುಪಿ ಕರಾವಳಿ ಬೈಪಾಸ್ ಪ್ಲೈಓವರ್‌ನಲ್ಲಿ ‘ಪೇಜಾವರಶ್ರೀ ಮೇಲ್ಸೇತುವೆ’ ಬೋರ್ಡ್ ಪ್ರತ್ಯಕ್ಷ!

Update: 2020-06-06 16:17 GMT

ಉಡುಪಿ, ಜೂ.6: ಉಡುಪಿ ಕರಾವಳಿ ಬೈಪಾಸ್‌ನ ರಾಷ್ಟ್ರೀಯ ಹೆದ್ದಾರಿ 66ರ ಮೇಲ್ಸೇತುವೆಯಲ್ಲಿ ‘ಪೇಜಾವರ ಶ್ರೀವಿಶ್ವೇಶ್ವತೀರ್ಥ ಮೇಲ್ಸೇತುವೆ’ ಎಂಬ ನಾಮಕರಣದೊಂದಿಗೆ ಬೋರ್ಡ್ ಒಂದು ಇಂದು ದಿಢೀರ್ ಪ್ರತ್ಯಕ್ಷವಾಗಿರುವ ಬಗ್ಗೆ ವರದಿಯಾಗಿದೆ.

ಮಂಗಳೂರು ಮತ್ತು ಬೆಂಗಳೂರಿನಲ್ಲಿನ ಮೇಲ್ಸೆತುವೆಗಳ ವಿವಾದದ ಬಳಿಕ ಅಲ್ಲಲ್ಲಿ ಇಂತಹ ಬೆಳವಣಿಗೆಗಳು ಕಂಡು ಬಂದಿದ್ದು, ಅದೇ ರೀತಿ ಇದೀಗ ಉಡುಪಿಯ ಕರಾವಳಿ ಬೈಪಾಸ್‌ನಲ್ಲಿರುವ ಮೇಲ್ಸೇತುವೆಯಲ್ಲಿ ನಾಮಕರಣ ಮಾಡಲಾದ ಬೋರ್ಡ್ ಕಂಡುಬಂದಿದೆ.

ಡಿವೈಡರ್ ಮಧ್ಯೆ ‘ಪೇಜಾವರ ವಿಶ್ವೇಶ್ವತೀರ್ಥ ಮೇಲ್ಸೇತುವೆ’ ಎಂಬ ಫ್ಲೆಕ್ಸ್‌ನಲ್ಲಿ ಬರೆದ ಬೋರ್ಡ್ ಸ್ಥಾಪಿಸಲಾಗಿದೆ. ಇದು ಸಂಘಟನೆಯೊಂದರ ಕಾರ್ಯಕರ್ತರು ಎಸಗಿರುವ ಕೃತ್ಯ ಎಂದು ಶಂಕಿಸಲಾಗಿದೆ. 

‘ಈ ಬೋರ್ಡ್ ವಿಚಾರ ತಿಳಿದುಬಂದಿದೆ. ಆದರೆ ಇದರ ಜವಾಬ್ದಾರಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವರದ್ದಾಗಿರುವುದರಿಂದ ಅವರಿಗೆ ಈ ಬಗ್ಗೆ ಮಾಹಿತಿ ನೀಡುತ್ತೇವೆ. ಸದ್ಯ ಆ ಬೋರ್ಡ್ ಸ್ಥಳದಲ್ಲೇ ಇದೆ ಎಂದು ಗೊತ್ತಾಗಿದೆ’ ಉಡುಪಿ ನಗರ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News