ಉಡುಪಿ ಜಿಲ್ಲೆಯಲ್ಲಿ ಶನಿವಾರ 107 ಪ್ರದೇಶಗಳಲ್ಲಿ ಸೀಲ್‌ಡೌನ್

Update: 2020-06-06 16:50 GMT

ಉಡುಪಿ, ಜೂ.6: ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಕ್ಕೆ ಸಂಬಂಧಿಸಿ ಇಂದು ಒಟ್ಟು 107 ಪ್ರದೇಶಗಳನ್ನು ಸೀಲ್‌ಡೌನ್ ಮಾಡಲಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಕಂಟೇನ್‌ಮೆಂಟ್ ವಲಯಗಳ ಸಂಖ್ಯೆ 310ಕ್ಕೆ ಏರಿಕೆಯಾಗಿದೆ.

ಬೈಂದೂರು ತಾಲೂಕಿನಲ್ಲಿ 44, ಕುಂದಾಪುರ ತಾಲೂಕಿನಲ್ಲಿ 35 ಪ್ರದೇಶಗಳನ್ನು ಕಂಟೇನ್‌ಮೆಂಟ್ ವಲಯಗಳನ್ನಾಗಿ ಘೋಷಿಸಲಾಗಿದೆ. ಈ ಮೂಲಕ ಬೈಂದೂರಿನಲ್ಲಿ ಒಟ್ಟು 137 ಮತ್ತು ಕುಂದಾಪುರದಲ್ಲಿ 75 ಪ್ರದೇಶಗಳನ್ನು ಸೀಲ್ ಡೌನ್ ಮಾಡಲಾಗಿದೆ ಎಂದು ತಹಶೀಲ್ದಾರ್ ಮಾಹಿತಿ ನೀಡಿದ್ದಾರೆ.

ಉಡುಪಿ ನಗರದ ಮಠದಬೆಟ್ಟು, ಉದ್ಯಾವರ, ಮಲ್ಪೆಯಲ್ಲಿ ತಲಾ ಒಂದು ಮತ್ತು ಬೈರಂಪಳ್ಳಿ ಶಿರೂರಿನಲ್ಲಿ ಪ್ರತ್ಯೇಕ ಎರಡು ಮನೆ ಸೇರಿದಂತೆ ಒಟ್ಟು ಐದು ಕಡೆಗಳಲ್ಲಿ ಸೀಲ್‌ಡೌನ್ ಮಾಡಿ ಕಂಟೇನ್‌ಮೆಂಟ್ ವಲಯ ಎಂಬುದಾಗಿ ಘೋಷಿಸಲಾಗಿದೆ. ಈವರೆಗೆ ಒಟ್ಟು 19 ಪ್ರದೇಶಗಳನ್ನು ಕಂಟೇನ್‌ಮೆಂಟ್ ಝೋನ್ ಎಂದು ಘೋಷಿಸಲಾಗಿದೆ.

ಕಾರ್ಕಳ ತಾಲೂಕಿನ ಮಿಯ್ಯರು, ಮಾಳದ ತಲಾ 3, ಹಿರ್ಗಾನ, ಕಡ್ತಲ, ಕುಕ್ಕುಂದೂರು, ಎರ್ಲಪಾಡಿ ತಲಾ ಎರಡು, ಮರ್ಣೆ, ನಿಟ್ಟೆ, ರೆಂಜಾಳ, ಕಲ್ಯ ತಲಾ ಒಂದು ಸೇರಿದಂತೆ ಒಟ್ಟು 18 ಪ್ರದೇಶಗಳನ್ನು ಕಂಟೇನ್‌ಮೆಂಟ್ ಝೋನ್ ಘೋಷಿಸಿ, ಸೀಲ್‌ಡೌನ್ ಮಾಡಲಾಗಿದೆ. ಈ ಮೂಲಕ ತಾಲೂಕಿನಲ್ಲಿ ಸೀಲ್‌ಡೌನ್ ಪ್ರದೇಶಗಳ ಸಂಖ್ಯೆ 46ಕ್ಕೆ ಏರಿಕೆಯಾಗಿದೆ.

ಬ್ರಹ್ಮಾವರ ತಾಲೂಕಿನ ಹಾರಾಡಿ ಗ್ರಾಮದ ಒಂದು ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ. ಕಾರ್ಕಳದಲ್ಲಿ ಕ್ವಾರಂಟೇನ್ ಮುಗಿಸಿ ಬಂದ ವ್ಯಕ್ತಿಯಲ್ಲಿ ಕೊರೋನ ಸೋಂಕು ಪತ್ತೆಯಾಗಿದೆ. ಈ ಮನೆಯಲ್ಲಿ ಒಟ್ಟು ನಾಲ್ಕು ಮಂದಿ ವಾಸವಾಗಿದ್ದಾರೆ. ಈವರೆಗೆ ತಾಲೂಕಿನಲ್ಲಿ 12 ಪ್ರದೇಶಗಳನ್ನು ಕಂಟೇನ್ ಮೆಂಟ್ ವಲಯ ಎಂಬುದಾಗಿ ಘೋಷಿಸಲಾಗಿದೆ.

ಹೆಬ್ರಿ ತಾಲೂಕಿನ ಮಡಾಮಕ್ಕಿ ಮತ್ತು ವರಂಗ ಗ್ರಾಮದ ತಲಾ ಎರಡು ಪ್ರತ್ಯೇಕ ಸ್ಥಳಗಳನ್ನು ಸೀಲ್‌ಡೌನ್ ಮಾಡಲಾಗಿದೆ. ವರಂಗದಲ್ಲಿ ಎರಡು ಮನೆಯಲ್ಲಿ ಒಟ್ಟು ನಾಲ್ಕು ಪಾಸಿಟಿವ್ ಪ್ರಕರಣ ಕಂಡುಬಂದಿದೆ. ತಾಲೂಕಿನಲ್ಲಿ ಈವರೆಗೆ ಒಟ್ಟು 8 ಕಡೆಗಳಲ್ಲಿ ಕಂಟೇನ್‌ಮೆಂಟ್ ವಲಯ ಘೋಷಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News