ಕೊರೋನ ಸೋಂಕು ಭೀತಿ: ಜೂ.30ರವರೆಗೆ ಬೈಕಂಪಾಡಿ, ಅಡ್ಕಾ ಮಸೀದಿ ತೆರೆಯದಿರಲು ನಿರ್ಧಾರ

Update: 2020-06-06 16:52 GMT

ಮಂಗಳೂರು, ಜೂ.6: ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೋನ ಸೋಂಕು ಭೀತಿಯ ಹಿನ್ನೆಲೆಯಲ್ಲಿ ಬೈಕಂಪಾಡಿ ಮೊಹಿಯುದ್ದೀನ್‌ಜುಮ್ಮಾ ಮಸೀದಿ ಹಾಗೂ ಇಂಡಸ್ಟ್ರಿಯಲ್ ಏರಿಯ ಅಡ್ಕಾ ಮಸೀದಿಯನ್ನು ಜೂ.30ರವರೆಗೆ ತೆರೆಯದಿರಲು ನಿರ್ಧಾರ ಕೈಗೊಳ್ಳಲಾಗಿದೆ.

ಬೈಕಂಪಾಡಿ ಮೊಹಿಯುದ್ದೀನ್ ಜುಮ್ಮಾ ಮಸೀದಿ ಮುಸ್ಲಿಂ ಜಮಾತ್‌ನ ಅಧೀನದ ಮಸೀದಿಗಳನ್ನು ತೆರೆಯುವ ಬಗ್ಗೆ ಜಮಾತ್‌ನ ಹಿರಿಯ- ಕಿರಿಯರ ಅಭಿಪ್ರಾಯ ಪಡೆಯಲು ಅಡ್ಕಾ ಹಾಲ್‌ನಲ್ಲಿ ಶನಿವಾರ ಸಭೆ ಕರೆಯಲಾಗಿತ್ತು.

ಸಭೆಯಲ್ಲಿ ಕೈಗೊಳ್ಳಲಾದ ತೀರ್ಮಾನವೇ ಅಂತಿಮವಾಗಿದ್ದು, ಮಸೀದಿಯನ್ನು ಜೂ.30ರವರೆಗೆ ಬೈಕಂಪಾಡಿ ಮೊಹಿಯುದ್ದೀನ್ ಜುಮ್ಮಾ ಮಸೀದಿ ಮುಸ್ಲಿಂ ಜಮಾತ್‌ನ ಅಧೀನದ ಮಸೀದಿಗಳನ್ನು ತೆರೆಯದಿರಲು ತೀರ್ಮಾನಿಸಲಾಗಿದೆ ಎಂದು ಜಮಾಅತ್ ಕಮಿಟಿಯ ಅಧ್ಯಕ್ಷ ನಾಸೀರ್ ಲಕ್ಕಿಸ್ಟಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News