ಉಡುಪಿ: ಸ್ವಚ್ಛ ಭಾರತ್ ಮಿಷನ್ ಕಿರು ಚಿತ್ರ ನಿರ್ಮಾಣದ ವಿಜೇತರು

Update: 2020-06-06 17:39 GMT

ಉಡುಪಿ, ಜೂ.6: ಸ್ವಚ್ಛ ಭಾರತ್ ಮಿಷನ್ (ಗ್ರಾ) ಕಾರ್ಯಕ್ರಮದಡಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡುವುದು, ಮನೆ ಹಂತದಲ್ಲಿ ತಾಜ್ಯ ವಿಂಗಡನೆ ಹಾಗೂ ನಿರ್ವಹಣೆ, ಪ್ಲಾಸ್ಟಿಕ್ ಬಳಕೆ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಉದ್ದೇಶದಿಂದ ಏರ್ಪಡಿಸಲಾದ ಸ್ಚಚ್ಛ ಭಾರತ-ಕಿರುಚಿತ್ರ ನಿರ್ಮಾಣ ಸ್ಪರ್ಧೆು ಫಲಿತಾಂಶವನ್ನು ಪ್ರಕಟಿಸಲಾಗಿದೆ.

ಕಿರುಚಿತ್ರ ನಿರ್ಮಾಣ ಸ್ಪರ್ಧೆಗೆ ‘ನನ್ನ ಕಸ ನನ್ನ ಜವಾಬ್ದಾರಿ’ ಹಾಗೂ ‘ಪ್ಲಾಸ್ಟಿಕ್ ಬಳಕೆ ವಿನಾಶಕ್ಕೆ ದಾರಿ’ ಎಂಬ ವಿಷಯಗಳನ್ನು ನೀಡಲಾಗಿತ್ತು. ಇದಕ್ಕೆ ಸಾರ್ವಜನಿಕರಿಂದ ಬಗ್ಗೆ ಉತ್ತಮ ಪ್ರತಿಕ್ರಿಯೆ ಬಂದಿದ್ದು, ಒಟ್ಟು 26 ಮಂದಿ ಕಿರುಚಿತ್ರ ತಯಾರಿಸಿ ಅರ್ಜಿಯನ್ನು ಸಲ್ಲಿಸಿದ್ದರು.
ಕಿರುಚಿತ್ರಕ್ಕೆ ಗರಿಷ್ಠ ಅವಧಿ 3 ನಿಮಿಷ (180 ಸೆಕೆಂಡ್ಸ್) ನಿಗದಿಪಡಿಸಲಾಗಿತ್ತು. ಕಿರುಚಿತ್ರದಲ್ಲಿ ಅಳವಡಿಸಲಾದ ಕ್ರಿಯಾಶೀಲತೆ, ಒಳಗೊಂಡಿರುವ ಸಂದೇಶ, ಕಿರುಚಿತ್ರದ ಗುಣಮಟ್ಟ ಹಾಗೂ ಕಿರುಚಿತ್ರದ ಒಟ್ಟು ಅವಧಿಯನ್ನು ಪರಿಗಣಿಸಿ ಪರಿಗಣಿಸಿ ಪ್ರಥಮ, ದ್ವಿತೀಯ ಹಾಗೂ ತೃತೀಯ ವಿಜೇತರನ್ನು ಜಿಪಂನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯ ಸಮಿತಿ ಸಭೆಯಲ್ಲಿ ಆಯ್ಕೆ ಮಾಡಲಾಯಿತು.

ಕಿರುಚಿತ್ರಕ್ಕೆ ಗರಿಷ್ಠ ಅವಧಿ 3 ನಿಮಿಷ (180 ಸೆಕೆಂಡ್ಸ್) ನಿಗದಿಪಡಿಸಲಾಗಿತ್ತು. ಕಿರುಚಿತ್ರದಲ್ಲಿ ಅಳವಡಿಸಲಾದ ಕ್ರಿಯಾಶೀಲತೆ, ಒಳಗೊಂಡಿರುವ ಸಂದೇಶ, ಕಿರುಚಿತ್ರದ ಗುಣಮಟ್ಟ ಹಾಗೂ ಕಿರುಚಿತ್ರದ ಒಟ್ಟು ಅವಧಿಯನ್ನು ಪರಿಗಣಿಸಿ ಪರಿಗಣಿಸಿ ಪ್ರಥಮ, ದ್ವಿತೀಯ ಹಾಗೂ ತೃತೀಯ ವಿಜೇತರನ್ನು ಜಿಪಂನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಅ್ಯಕ್ಷತೆಯಸಮಿತಿಸೆಯಲ್ಲಿ ಆಯ್ಕೆ ಮಾಡಲಾಯಿತು.

ವಿಜೇತರ ವಿವರ ಹೀಗಿದೆ.

ಪ್ರಥಮ: ಅವಿಲ್ ರೆಂಜಾಳ, ದ್ವೀತಿಯ: ಭಾಸ್ಕರ್ ಮಣಿಪಾಲ, ತೃತೀಯ: ಸತ್ಯೇಂದ್ರ ಪೈ. ವಿಜೇತರಿಗೆ ಪ್ರಥಮ ಬಹುಮಾನ- 10,000ರೂ. ನಗದು ಹಾಗೂ ಪ್ರಶಸ್ತಿ ಪತ್ರ, ದ್ವಿತೀಯ ಬಹುಮಾನ: 7,000 ರೂ. ನಗದು ಬಹುಮಾನ, ಪ್ರಶಸ್ತಿ ಪತ್ರ, ತೃತೀಯ ಬಹುಮಾನ: 5,000ರೂ. ನಗದು ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು.

ಆಯ್ಕೆ ಸಮಿತಿ ಸಭೆಯಲ್ಲಿ ಪ್ರಸನ್ನ ಪ್ರಸಾದ್ ಭಟ್ ಹಾಗೂ ಅಕ್ಷಯ್ ಕಾಮತ್ ಇವರ ಚಿತ್ರಗಳನ್ನು ಕ್ರಿಯಾಶೀಲ ಕಿರುಚಿತ್ರಗಳು ಎಂದು ಪರಿಗಣಿಸಿ ಉತ್ತಮ ಚಿತ್ರ ಪ್ರಶಸ್ತಿ ಹಾಗೂ ಭಾಗವಹಿಸಿದ ಎಲ್ಲರಿಗೂ ಪ್ರಶಂಸಾ ಪತ್ರಗಳನ್ನು ನೀಡಲು ತಿರ್ಮಾನಿಸಲಾಗಿದೆ ಎಂದು ಉಡುಪಿ ಜಿಪಂ ಮುಖ್ಯ ಕಾರ್ಯ ನಿರ್ವಹಾಣಧಿಕಾರಿ ಪ್ರೀತಿ ಗೆಹ್ಲೋಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News