​ದ.ಕ.: ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಸಹಾಯವಾಣಿ

Update: 2020-06-06 17:41 GMT

ಮಂಗಳೂರು, ಜೂ.6: ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಇದೇ ಜೂ.25ರಿಂದ ಪರೀಕ್ಷೆ ನಡೆಯಲಿದ್ದು, ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಪರೀಕ್ಷೆಯ ಬಗ್ಗೆ ಮಾಹಿತಿ ಪಡೆಯಲು ದ.ಕ. ಜಿಲ್ಲೆಗೆ ಸಂಬಂಧಿಸಿದಂತೆ ಜಿಲ್ಲಾ ಕೇಂದ್ರ ಹಾಗೂ ತಾಲೂಕು ಕೇಂದ್ರಗಳಲ್ಲಿ ಸಹಾಯವಾಣಿ ಆರಂಭಿಸಲಾಗಿದೆ.

ಪ್ರತಿದಿನ (ಸರಕಾರಿ ರಜಾದಿನ ಹೊರತು ಪಡಿಸಿ) ಕಚೇರಿ ಸಮಯದಲ್ಲಿ (ಬೆಳಗ್ಗೆ 9:30ರಿಂದ ಸಂಜೆ 5:30) ಎಸೆಸೆಲ್ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಯಾವುದೇ ಸಂದೇಹಗಳಿದ್ದಲ್ಲಿ ಈ ದೂರವಾಣಿ ಸಂಪರ್ಕಿಸಬಹುದು. ಈ ಸಹಾಯವಾಣಿಗಳು ಜೂ.8ರಿಂದ ಚಾಲ್ತಿಯಲ್ಲಿರುತ್ತವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರು ತಿಳಿಸಿದ್ದಾರೆ.

ಜಿಲ್ಲಾ ಕೇಂದ್ರದ ಸಹಾಯವಾಣಿ: 180042511017 (ಟೋಲ್ ಪ್ರೀ), 9845651353
ತಾಲೂಕು ಕೇಂದ್ರಗಳ ಸಹಾಯವಾಣಿ:
ಬಂಟ್ವಾಳ: 08255- 232579, 9449020453
ಬೆಳ್ತಂಗಡಿ: 08256- 232004, 9008763829
ಮಂಗಳೂರು ಉತ್ತರ: 0824- 2423627, 9449946810
ಮಂಗಳೂರು ದಕ್ಷಿಣ: 0824- 2451250, 9740028090
ಮೂಡಬಿದಿರೆ: 08258- 236461, 948315753
ಪುತ್ತೂರು: 08251- 230827, 7619564178
ಸುಳ್ಯ: 08257- 230419, 9481720143

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News