ಮೂಡುಬಿದಿರೆ ನ್ಯಾಯಾಲಯದ ಆವರಣದಲ್ಲಿ ಪರಿಸರ ಜಾಗೃತಿ

Update: 2020-06-06 18:00 GMT

ಮೂಡುಬಿದಿರೆ: ವಿಶ್ವ ಪರಿಸರ ದಿನಾಚರಣೆಯಂಗವಾಗಿ ಮೂಡುಬಿದಿರೆ ವಲಯ ಅರಣ್ಯ ಇಲಾಖೆಯ ವತಿಯಿಂದ ಸಾಮಾಜಿಕ ವಲಯ ಅರಣ್ಯ ಮಂಗಳೂರು, ಮೂಡುಬಿದಿರೆ ನ್ಯಾಯಾಲಯ, ಜಿಲ್ಲಾ  ಕಾನೂನು ಸೇವಾ ಆಯೋಗ ಮತ್ತು  ಮೂಡುಬಿದಿರೆ ವಕೀಲರ ಸಂಘ ಇವುಗಳ ಸಹಭಾಗಿತ್ವದಲ್ಲಿ ನ್ಯಾಯಾಲಯದ ಆವರಣದಲ್ಲಿ ಶನಿವಾರ ಪರಿಸರ ಜಾಗೃತಿ ಕಾರ್ಯಕ್ರಮವು ನಡೆಯಿತು. 

ಮೂಡುಬಿದಿರೆ ನ್ಯಾಯಾಲಯದ ನ್ಯಾಯಾಧೀಶ ಯಶವಂತ ಕುಮಾರ್ ಅವರು ಉಪಯುಕ್ತ ಗಿಡಗಳನ್ನು ನೆಟ್ಟು ಸಾಂದರ್ಭಿಕವಾಗಿ ಮಾತನಾಡಿ, `ಗಿಡಮರಗಳಿಂದ ಮನುಕುಲದ ಉಳಿವಿಗೆ ಅಗತ್ಯವಾದ ಆಮ್ಲಜನಕ, ಜಲನಿಧಿ ಸಂವರ್ಧನೆ ಸಾಧ್ಯ' ಎಂದರು. ನ್ಯಾಯಾಲಯದ ಆವರಣದಲ್ಲಿ  ಈ ಹಿಂದೆ ನೆಟ್ಟ ಗಿಡಗಳು ಯೋಗ್ಯ ಪೋಷಣೆಯಿಂದ ಮರವಾಗಿ ಬೆಳೆದಿರುವುದರ ಬಗ್ಗೆ ಅವರು ಸಂತಸ ವ್ಯಕ್ತಪಡಿಸಿದರು. 

ಶಿರಸ್ತೆದಾರ್ ಗೀತಾ, ವಲಯ ಅರಣ್ಯಾಧಿಕಾರಿ ಪ್ರಕಾಶ್ ಪೂಜಾರಿ, ಉಪವಲಯ ಅರಣ್ಯಾಧಿಕಾರಿಗಳಾದ ಮಂಜುನಾಥ ಗಾಣಿಗ, ಅಶ್ವಿತ್ ಗಟ್ಟಿ, ಸಾಮಾಜಿಕ ಅರಣ್ಯ ವಲಯದ ಉಪ ವಲಯಾರಣ್ಯಾಧಿಕಾರಿ ರೋಹಿಣಿ ಮ. ತಲ್ಲೂರು, ವಕೀಲರ ಸಂಘದ ಅಧ್ಯಕ್ಷ  ಎಂ. ಎಸ್. ತಂತ್ರಿ, ಉಪಾಧ್ಯಕ್ಷ  ಎಂ.ಕೆ. ವಿಜೇಂದ್ರ ಕುಮಾರ್, ಕೋಶಾಧಿಕಾರಿ ಜಯಪ್ರಕಾಶ್ ಭಂಡಾರಿ, ಎಂ. ಬಾಹುಬಲಿ ಪ್ರಸಾದ್, ಕೆ. ಆರ್. ಪಂಡಿತ್, ಶರತ್ ಶೆಟ್ಟಿ , ಶಾಂತಿಪ್ರಸಾದ್ ಹೆಗ್ಡೆ, ನಾಗೇಶ್ ಶೆಟ್ಟಿ  ಮೊದಲಾದ  ವಕೀಲರು, ಅರಣ್ಯ ಇಲಾಖೆ ಮತ್ತು ನ್ಯಾಯಾಲಯದ  ಸಿಬಂದಿಗಳು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News