ಗುಜರಾತ್ ಕಾಂಗ್ರೆಸ್ ಶಾಸಕರು ರಾಜಸ್ತಾನದ ರೆಸಾರ್ಟ್‌ಗೆ ಸ್ಥಳಾಂತರ

Update: 2020-06-08 16:19 GMT

ಅಹ್ಮದಾಬಾದ್, ಜೂ.8: ರಾಜ್ಯಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕರನ್ನು ಬಿಜೆಪಿ ಆಮಿಷವೊಡ್ಡಿ ಸೆಳೆಯುವ ಭೀತಿ ಇರುವುದರಿಂದ ಶಾಸಕರನ್ನು ನೆರೆಯ ರಾಜಸ್ತಾನದ ರೆಸಾರ್ಟ್‌ಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ ಎಂದು ಗುಜರಾತ್ ಕಾಂಗ್ರೆಸ್ ಸೋಮವಾರ ಹೇಳಿದೆ.

ಬಿಜೆಪಿಯು ಶಾಸಕರ ಕುದುರೆ ವ್ಯಾಪಾರದಲ್ಲಿ ತೊಡಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಕಳೆದ ಎರಡು ದಿನದಲ್ಲಿ ಕಾಂಗ್ರೆಸ್ ತನ್ನ ಶಾಸಕರನ್ನು ರಾಜ್ಯದ ವಿವಿಧ ರೆಸಾರ್ಟ್‌ಗೆ ಸ್ಥಳಾಂತರಿಸಲಾಗಿತ್ತು. ಆದರೆ ಬಿಜೆಪಿಯು ಬ್ಲಾಕ್‌ಮೇಲ್, ಬೆದರಿಕೆ, ಹಣಬಲ ಹೀಗೆ ವಿವಿಧ ಮಾರ್ಗಗಳ ಮೂಲಕ ಪಕ್ಷದ ಸದಸ್ಯರನ್ನು ಸೆಳೆಯಲು ಶತಪ್ರಯತ್ನ ಮುಂದುವರಿಸಿರುವುದರಿಂದ ಈಗ ಎಲ್ಲಾ ಶಾಸಕರನ್ನೂ ರಾಜಸ್ತಾನದ ಸಿರೋಹಿ ರಸ್ತೆಯ ರೆಸಾರ್ಟ್‌ಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

182 ಸದಸ್ಯಬಲದ ಗುಜರಾತ್ ವಿಧಾನಸಭೆಯ ಈಗಿನ ಸದಸ್ಯಬಲ 172 ಆಗಿದೆ (ಕೋರ್ಟ್ ಕೇಸ್‌ನ ಕಾರಣ 2 ಸ್ಥಾನ, ಶಾಸಕರ ರಾಜೀನಾಮೆ ಕಾರಣ 8 ಸ್ಥಾನ ಖಾಲಿಯಿದೆ). ಬಿಜೆಪಿ 103, ಕಾಂಗ್ರೆಸ್ 65, ಭಾರತೀಯ ಟ್ರೈಬಲ್ ಪಾರ್ಟಿ 2 ಸ್ಥಾನ, ಎನ್‌ಸಿಪಿ 1, ಪಕ್ಷೇತರ ಸದಸ್ಯ 1(ಜಿಗ್ನೇಶ್ ಮೆವಾನಿ) ಸ್ಥಾನ ಹೊಂದಿದೆ. ಗುಜರಾತ್‌ನಿಂದ 4 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು ಕಾಂಗ್ರೆಸ್ 2 ಸ್ಥಾನ ಗೆಲ್ಲುವ ನಿರೀಕ್ಷೆಯಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News