ಗ್ಯಾಸ್ ಸೋರಿಕೆ ಪ್ರಕರಣ: ಜೂನ್ 20ರಂದು ತನಿಖಾ ವರದಿ ಸಲ್ಲಿಕೆ

Update: 2020-06-09 17:42 GMT

ಹೈದರಾಬಾದ್, ಜೂ.9: ವಿಶಾಖಪಟ್ಟಣಂನ ಎಲ್‌ಜಿ ಪಾಲಿಮರ್ಸ್ ಸ್ಥಾವರದಲ್ಲಿ ಕಳೆದ ತಿಂಗಳು ನಡೆದ ಅನಿಲ ಸೋರಿಕೆ ಪ್ರಕರಣದ ಬಗ್ಗೆ ತನಿಖೆ ನಡೆಸಲು ಆಂಧ್ರಪ್ರದೇಶ ಸರಕಾರ ನೇಮಿಸಿದ್ದ ಉನ್ನತ ಮಟ್ಟದ ಸಮಿತಿ ತನಿಖೆ ಪೂರ್ಣಗೊಳಿಸಿದ್ದು ಜೂನ್ 20ರಂದು ವರದಿ ಸಲ್ಲಿಸಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಳೆದ 3 ದಿನಗಳಲ್ಲಿ ಸಮಿತಿಯು ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಸಾಮಾಜಿಕ ಕಾರ್ಯಕರ್ತರು ಎಲ್‌ಜಿ ಪಾಲಿಮರ್ಸ್‌ನ ನೌಕರರನ್ನು ಪ್ರಶ್ನಿಸಿದೆ ಹಾಗೂ ಹಲವು ಸಂತ್ರಸ್ತರನ್ನು ಮತ್ತು ಅವರ ಕುಟುಂಬದವರನ್ನು ಭೇಟಿಯಾಗಿ ಅಭಿಪ್ರಾಯ ಸಂಗ್ರಹಿಸಿದೆ.

ಅಲ್ಲದೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಪೆಟ್ರೋಲಿಯಂ, ಎನ್‌ಡಿಆರ್‌ಎಫ್ ನ ತಾಂತ್ರಿಕ ತಂಡ ಸೇರಿದಂತೆ ಹಲವು ಕ್ಷೇತ್ರಗಳ ತಂತ್ರಜ್ಞರೊಂದಿಗೆ ವಿವರವಾಗಿ ಚರ್ಚಿಸಿದ್ದು, ಸ್ಟೈರೀನ್ ಅನಿಲ ದಾಸ್ತಾನಿಡುವ ಟ್ಯಾಂಕ್‌ನ ವಿನ್ಯಾಸ ಮತ್ತಿತರ ವಿಷಯಗಳ ಕುರಿತು ತನಿಖೆ ನಡೆಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News