ಯೋಜಿತವಲ್ಲದ ಲಾಕ್‌ಡೌನ್ ರೈತರ ಸ್ಥಿತಿಯನ್ನು ಶೋಚನೀಯವಾಗಿಸಿದೆ: ಶಶಿ ತರೂರ್

Update: 2020-06-10 14:38 GMT

ಹೊಸದಿಲ್ಲಿ,ಜೂ.10: ಕೊರೋನ ವೈರಸ್ ಲಾಕ್‌ಡೌನ್ ಭಾರತೀಯ ರೈತರನ್ನು ಸಾಲಕೂಪಕ್ಕೆ ತಳ್ಳಿದೆ ಮತ್ತು ಪೂರೈಕೆ ಸರಪಳಿಯನ್ನು ತುಂಡರಿಸಿದೆ ಎಂದು ಬುಧವಾರ ಟ್ವೀಟಿಸಿರುವ ಕಾಂಗ್ರೆಸ್ ನಾಯಕ ಹಾಗೂ ಸಂಸದ ಶಶಿ ತರೂರ್ ಅವರು,ಯೋಜಿತವಲ್ಲದ ಲಾಕ್‌ಡೌನ್‌ನಿಂದಾಗಿ ರೈತರ ಸ್ಥಿತಿಯು ಶೋಚನೀಯವಾಗುತ್ತಿದೆ ಎಂದು ಹೇಳಿದ್ದಾರೆ.

ಕಳೆದ ಕೊಯ್ಲಿನ ಸಮಯದಲ್ಲಿ ಲಾಕ್‌ಡೌನ್‌ನಿಂದಾಗಿ ಬೆಳೆಗಳನ್ನು ಮಾರಲು ಸಾಧ್ಯವಾಗದೆ ರೈತರು ನಷ್ಟವನ್ನು ಅನುಭವಿಸಿದ್ದಾರೆ ಎಂದು ಹೇಳಿರುವ ತರೂರ್,ಸರಕಾರವು ಘೋಷಿಸಿರುವ ವಿಶೇಷ ಹಣಕಾಸು ಪ್ಯಾಕೇಜ್‌ನಲ್ಲಿ ರೈತರಿಗೆ ಏನನ್ನೂ ನೀಡಿಲ್ಲ. ಅವರಿಗೆ ನೆರವಿನ ಅಗತ್ಯವಿದೆ ಎಂದಿದ್ದಾರೆ.

ಬೆಳೆಗಾರರು ಮತ್ತು ಬಳಕೆದಾರರನ್ನು ಶೋಷಿಸುವ ಮೂಲಕ ಲಾಭವನ್ನು ಕೊಳ್ಳೆ ಹೊಡೆಯುತ್ತಿರುವ ಮಧ್ಯವರ್ತಿಗಳ ವಿರುದ್ಧ ಕಿಡಿಕಾರಿರುವ ಅವರು,ಮಧ್ಯವರ್ತಿಗಳನ್ನು ತೊಲಗಿಸಬೇಕು ಮತ್ತು ಭಾರತೀಯ ಆಹಾರ ನಿಗಮವೇ ನೇರವಾಗಿ ರೈತರಿಂದ ಉತ್ಪನ್ನಗಳನ್ನು ಖರೀದಿಸಬೇಕು, ಇದರಿಂದ ಜನಸಾಮಾನ್ಯರಿಗೆ ಅಗ್ಗದ ದರಗಳಲ್ಲಿ ಆಹಾರ ಸಾಮಗ್ರಿಗಳು ದೊರೆಯುತ್ತವೆ ಎಂದಿದ್ದಾರೆ.

 ರೈತರ ಪರವಾಗಿ ಧ್ವನಿಗಳನ್ನೆತ್ತಲು ಕಿಸಾನ್ ಕಾಂಗ್ರೆಸ್‌ನ ‘ಕಿಸಾನ್ ಕೆ ಬೋಲ್’ಸಾಮಾಜಿಕ ಜಾಲತಾಣ ಅಭಿಯಾನದ ನೇಪಥ್ಯದಲ್ಲಿ ತರೂರ್ ಈ ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ.

                            

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News