ಎಂಟು ದಿನಗಳಿಂದ ನಾಪತ್ತೆಯಾಗಿದ್ದ 82 ವರ್ಷದ ಕೋವಿಡ್- 19 ರೋಗಿಯ ಶವ ಆಸ್ಪತ್ರೆ ಶೌಚಾಲಯದಲ್ಲಿ ಪತ್ತೆ

Update: 2020-06-10 17:08 GMT

ಮುಂಬೈ,ಜೂ.10: ಜಳಗಾಂವ್‌ನ ಸರಕಾರಿ ಆಸ್ಪತ್ರೆಯಿಂದ ಜೂ.2ರಿಂದ ನಾಪತ್ತೆಯಾಗಿದ್ದ 82 ವರ್ಷ ಪ್ರಾಯದ ಕೊರೋನ ವೈರಸ್ ಸೋಂಕಿತ ಮಹಿಳೆಯ ಶವ ಬುಧವಾರ ಅದೇ ಆಸ್ಪತ್ರೆಯ ಶೌಚಾಲಯದಲ್ಲಿ ಪತ್ತೆಯಾಗಿದ್ದು,ಪ್ರದೇಶದಲ್ಲಿ ಆತಂಕ ಸೃಷ್ಟಿಯಾಗಿದೆ. ಇದು ದೇಶದಲ್ಲಿಯೇ ಅತ್ಯಧಿಕ ಸಂಖ್ಯೆಯ ಕೊರೋನ ವೈರಸ್ ಪ್ರಕರಣಗಳೊಂದಿಗೆ ಹೆಣಗಾಡುತ್ತಿರುವ ಮಹಾರಾಷ್ಟ್ರದಲ್ಲಿ ರೋಗಿಗಳು ನಾಪತ್ತೆಯಾಗುತ್ತಿರುವ ಇತ್ತೀಚಿನ ಪ್ರಕರಣವಾಗಿದೆ.

ಘಟನೆಯ ಕುರಿತು ಟ್ವೀಟಿಸಿರುವ ಮಹಾರಾಷ್ಟ್ರದ ಬಿಜೆಪಿ ನಾಯಕ ಕಿರೀಟ್ ಸೋಮೈಯಾ ಅವರು,  ‘ಇದು ಆಘಾತಕಾರಿ,ನಮಗೆ ನ್ಯಾಯ ಬೇಕು ’ಎಂದು ಮೃತ ಮಹಿಳೆಯ ಮೊಮ್ಮಗ ಹೇಳಿದ್ದಾನೆ ಮತ್ತು ನಾವು ಆತನಿಗೆ ನ್ಯಾಯ ಕೊಡಿಸುತ್ತೇವೆ ಎಂದಿದ್ದಾರೆ.

ರಾಜ್ಯದಲ್ಲಿ ಕೊರೋನ ವೈರಸ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಆರೋಗ್ಯ ರಕ್ಷಣೆ ವ್ಯವಸ್ಥೆಯು ತೀವ್ರ ಒತ್ತಡದಲ್ಲಿ ಸಿಲುಕಿದ್ದು,ರೋಗಿಗಳು ಮತ್ತು ಮೃತರ ಶವಗಳು ನಾಪತ್ತೆಯಾಗಿರುವ ಬಗ್ಗೆ ಹಲವಾರು ಪ್ರಕರಣಗಳು ದಾಖಲಾಗಿವೆ.

ಮುಂಬೈನಲ್ಲಿ ಇತ್ತೀಚಿನ ದಿನಗಳಲ್ಲಿ ಆರು ಶವಗಳು ನಾಪತ್ತೆಯಾಗಿವೆ ಅಥವಾ ವಾರಸುದಾರರಿಲ್ಲದ ಶವಗಳೆಂದು ಅಂತ್ಯಸಂಸ್ಕಾರ ನಡೆಸಲಾಗಿದ್ದರೆ,ತಮ್ಮ ಬಂಧುಗಳ ಶವಗಳಿಗಾಗಿ ತಾವು ಹುಡುಕಾಡುತ್ತಿದ್ದೇವೆ ಎಂದು ಹಲವಾರು ಕುಟುಂಬಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News