ಗುಲಾಮರ ವ್ಯಾಪಾರಿಯ ಪ್ರತಿಮೆಯನ್ನು ಕೆಡವಿದ ಲಂಡನ್

Update: 2020-06-10 18:49 GMT
ಫೋಟೊ ಕೃಪೆ: twitter.com/SadiqKhan

ಲಂಡನ್, ಜೂ. 10: 18ನೇ ಶತಮಾನದ ಗುಲಾಮರ ವ್ಯಾಪಾರಿ ರಾಬರ್ಟ್ ಮಿಲಿಗನ್‌ನ ಪ್ರತಿಮೆಯನ್ನು ಲಂಡನ್‌ನ ವಸ್ತುಸಂಗ್ರಹಾಲಯವೊಂದರ ಹೊರಭಾಗದಿಂದ ಮಂಗಳವಾರ ತೆರವುಗೊಳಿಸಲಾಗಿದೆ. ಜನಾಂಗೀಯ ತಾರತಮ್ಯವನ್ನು ವಿರೋಧಿಸಿ ಜಗತ್ತಿನಾದ್ಯಂತ ನಡೆಯುತ್ತಿರುವ ಪ್ರತಿಭಟನೆ ಹಾಗೂ ತನ್ನ ಸಾಮ್ರಾಜ್ಯಶಾಹಿ ಇತಿಹಾಸವನ್ನು ಬ್ರಿಟನ್ ಹೇಗೆ ಸ್ಮರಿಸಿಕೊಳ್ಳುತ್ತದೆ ಎಂಬ ಬಗ್ಗೆ ನಡೆದ ವ್ಯಾಪಕ ಚರ್ಚೆಯ ಬಳಿಕ ಈ ಬೆಳವಣಿಗೆ ನಡೆದಿದೆ.

ಗುಲಾಮರ ವ್ಯಾಪಾರಿಗಳು ಮತ್ತು ಸಾಮ್ರಾಜ್ಯಶಾಹಿಗಳನ್ನು ವೈಭವೀಕರಿಸುವ ಪ್ರತಿಮೆಗಳ ಬಗ್ಗೆ ಇತ್ತೀಚಿನ ದಿನಗಳಲ್ಲಿ ಭಾರೀ ಚರ್ಚೆಗಳು ನಡೆಯುತ್ತಿವೆ. ಜಾರ್ಜ್ ಫ್ಲಾಯ್ಡಾ ಸಾವಿನ ಬಳಿಕ ಅಮೆರಿಕದಲ್ಲಿ ಆರಂಭಗೊಂಡಿರುವ ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಚಳವಳಿಯ ಜಗತ್ತಿನಾದ್ಯಂತ ವಿಸ್ತರಿಸುತ್ತಿದ್ದು, ಹಲವು ಬದಲಾವಣೆಗಳು ನಡೆಯುತ್ತಿವೆ.

ನಮ್ಮ ನಗರ ಮತ್ತು ದೇಶದ ಹೆಚ್ಚಿನ ಸಂಪತ್ತು ಬಂದದ್ದು ಗುಲಾಮರ ವ್ಯಾಪಾರದಿಂದ ಎನ್ನುವುದು ವಿಷಾದನೀಯ ಸತ್ಯವಾದರೂ, ಅದನ್ನು ನಾವು ನಮ್ಮ ಸಾರ್ವಜನಿಕ ಬದುಕಿನಲ್ಲಿ ಆಚರಿಸಬೇಕಾಗಿಲ್ಲ ಎಂದು ಲಂಡನ್ ಮೇಯರ್ ಸಾದಿಕ್ ಖಾನ್ ಟ್ವಿಟರ್‌ನಲ್ಲಿ ಹೇಳಿದ್ದಾರೆ ಹಾಗೂ ಪ್ರತಿಮೆಯ ಚಿತ್ರವೊಂದನ್ನೂ ಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News